ಇಂದು ದೇಶವನ್ನುದ್ದೇಶಿಸಿ ಮಾತನಾಡಲಿರುವ ಮೋದಿ
25/04/2021
ನವದೆಹಲಿ: ತಿಂಗಳ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನ 76ನೇ ಕಂತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾನುವಾರ ಬೆಳಿಗ್ಗೆ 11ಗಂಟೆ ಕಾರ್ಯಕ್ರಮ ಪ್ರಸಾರವಾಗಲಿದೆ.
ಆಕಾಶವಾಣಿ (ಎಐಆರ್) ಮತ್ತು ದೂರದರ್ಶನದಲ್ಲಿ ಪ್ರಧಾನಿ ಮೋದಿ ಅವರ ‘ಮನ್ ಕಿ ಬಾತ್’ ಪ್ರಸಾರವಾಗಲಿದೆ. ಎಐಆರ್ ನ್ಯೂಸ್ ವೆಬ್ ಸೈಟ್‌ನಲ್ಲೂ (www.newsonair.com) ಪ್ರಧಾನಿ ಮಾತು ಕೇಳಬಹುದಾಗಿದೆ.
ಕೊರೊನಾ ವೈರಸ್ ದೇಶದಲ್ಲಿ ಏರುಗತಿಯಲ್ಲಿರುವ ನಡುವೆ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನ ಅವರ ಭಾಷಣ ಮಹತ್ವ ಪಡೆದಿದೆ. ಇನ್ನೊಂದೆಡೆ ಕೊರೊನಾ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಯಾವುದಾದರೂ ಘೋಷಣೆ ಮಾಡಲಿದ್ದಾರೆಯೇ? ಎನ್ನುವ ಕುತೂಹಲ ಕೂಡ ಮೂಡಿವೆ.