ಮಹಾರಾಷ್ಟ್ರ ಚುನಾವಣೆ: ಚುನಾವಣಾ ಆಯೋಗದ ವಿರುದ್ಧ ಶಿವಸೇನೆ ಗರಂ
ಮಹಾರಾಷ್ಟ್ರದಲ್ಲಿ ಚುನಾವಣಾ ಆಯೋಗವು ತಪಾಸಣೆ ಪ್ರಕ್ರಿಯೆಗಳಲ್ಲಿ ಪಕ್ಷಪಾತವನ್ನು ಮಾಡುತ್ತಿದೆ ಎಂದು ಶಿವಸೇನೆ ಉದ್ಧವ್ ಬಣದ ನಾಯಕ ಸಂಜಯ್ ರಾವತ್ ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಚುನಾವಣಾ ಆಯೋಗದ ವ್ಯಾಪ್ತಿಗೆ ಬರುವುದಿಲ್ಲವೇ? ಪ್ರಧಾನಿ, ಗೃಹ ಸಚಿವರು ಮತ್ತು ಕೇಂದ್ರ ಸಚಿವರು ಜನರಿಗೆ ಏನು ಬೇಕಾದರೂ ಹಂಚಬಹುದೇ? ಇದು ಯಾವ ರೀತಿಯ ನಿಷ್ಪಕ್ಷಪಾತ ನ್ಯಾಯ? ಎಂದು ಅವರು ಪ್ರಶ್ನಿಸಿದ್ದಾರೆ.
ಶಿವಸೇನೆ ನಾಯಕರ ಲಗೇಜ್‌ಗಳು, ಹೆಲಿಕಾಪ್ಟರ್ ಗಳು ಮತ್ತು ಖಾಸಗಿ ವಾಹನಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಆಡಳಿತಾರೂಢ ಮೈತ್ರಿಕೂಟದ ಪ್ರಮುಖ ನಾಯಕರ ವಾಹನಗಳನ್ನು, ಲಗೇಜ್ ಗಳನ್ನು ಪರಿಶೀಲಿಸಲಾಗುತ್ತಿಲ್ಲ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ.
ನಮ್ಮ ಲಗೇಜ್, ಹೆಲಿಕಾಪ್ಟರ್, ಖಾಸಗಿ ಜೆಟ್, ಕಾರುಗಳು ಎಲ್ಲವನ್ನೂ ಪರಿಶೀಲಿಸಲಾಗಿದೆ. ಇದನ್ನು ನಿಷ್ಪಕ್ಷಪಾತವಾಗಿ ಮಾಡಿದರೆ ನಮಗೆ ಸಮಸ್ಯೆ ಇಲ್ಲ. ಏಕನಾಥ್ ಶಿಂಧೆ, ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನವಿಸ್ ಸ್ಪರ್ಧಿಸುತ್ತಿರುವ ಸ್ಥಳದಲ್ಲಿ ಈಗಾಗಲೇ 25-25 ಕೋಟಿ ತಲುಪಿದೆ.
ಲೋಕಸಭೆ ಚುನಾವಣೆಯ ವೇಳೆ 20-20 ಬ್ಯಾಗ್ಗಳನ್ನು ಹೆಲಿಕಾಪ್ಟರ್ಗಳ ಮೂಲಕ ಹೇಗೆ ತರಲಾಗಿದೆ ಎಂಬ ವಿಡಿಯೋಗಳನ್ನೂ ನಾವು ಬಯಲುಗೊಳಿಸಿದ್ದೆವು. ನಮ್ಮ ಲಗೇಜ್ ಗಳನ್ನು ಪರಿಶೀಲಿಸಲಾಗಿದೆ ಆದರೆ ಏಕನಾಥ್ ಶಿಂಧೆ, ದೇವೇಂದ್ರ ಫಡ್ನವಿಸ್, ಅಜಿತ್ ಪವಾರ್, ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಹೆಲಿಕಾಪ್ಟರ್ ಮತ್ತು ಕಾರುಗಳನ್ನು ಪರಿಶೀಲಿಸಲಾಗಿದೆಯೇ? ಅವರ ಬ್ಯಾಗ್ ಗಳಲ್ಲಿ ಬಟ್ಟೆ ಮಾತ್ರ ಇದೆಯೇ? ಮಹಾರಾಷ್ಟ್ರದಲ್ಲಿ ಹಣ ಹಂಚಿಕೆಯಾಗುತ್ತಿರುವುದು ಚುನಾವಣಾ ವೀಕ್ಷಕರಿಗೆ ಗಮನಕ್ಕೆ ಬಂದಿಲ್ವ ಎಂದು ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
ಒಡಿಶಾದಲ್ಲಿ ಪ್ರಧಾನಿ ಮೋದಿಯವರ ಹೆಲಿಕಾಪ್ಟರ್ ಅನ್ನು ಪರಿಶೀಲಿಸಿದ ವ್ಯಕ್ತಿಯನ್ನು ಅಮಾನತುಗೊಳಿಸಲಾಗಿದೆ.
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಸೋಮವಾರ ಇದೇ ರೀತಿಯ ಅನುಭವವನ್ನು ಹಂಚಿಕೊಂಡಿದ್ದರು. ಯವತ್ಮಾಲ್ ನ ವಾನಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ತಮ್ಮ ಸ್ವಂತ ಬ್ಯಾಗ್ ಅನ್ನು ಹೇಗೆ ಪರಿಶೀಲಿಸಲಾಯಿತು ಎಂಬುದನ್ನು ವಿವರಿಸಿದ್ದರು. ನಾವು ಸಾಗಿಸುವ ಪ್ರತಿಯೊಂದು ವಸ್ತುವನ್ನು ಅವರು ಪರಿಶೀಲಿಸುತ್ತಾರೆ. ಆದರೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರ ಬ್ಯಾಗ್ ಗಳನ್ನು ಪರಿಶೀಲಿಸುತ್ತಾರೆಯೇ? ಎಂದು ಪ್ರಶ್ನಿಸಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj