ರಶ್ಮಿಕಾ ಜೊತೆ ನಿಶ್ಚಿತಾರ್ಥ: ಕೊನೆಗೂ ಮೌನ ಮುರಿದ ವಿಜಯ್ ದೇವರಕೊಂಡ! - Mahanayaka

ರಶ್ಮಿಕಾ ಜೊತೆ ನಿಶ್ಚಿತಾರ್ಥ: ಕೊನೆಗೂ ಮೌನ ಮುರಿದ ವಿಜಯ್ ದೇವರಕೊಂಡ!

rashmika mandanna
20/01/2024

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಆಗಲಿದ್ದಾರೆ ಅಂತ ಕೆಲವೊಂದು ಮಾಧ್ಯಮಗಳ ವದಂತಿ ಹಬ್ಬಿಸಿದ್ದವು.  ಈ ಬಗ್ಗೆ ಇದೀಗ ವಿಜಯ್ ದೇವರಕೊಂಡ ಸ್ಪಷ್ಟನೆ ನೀಡಿದ್ದಾರೆ.

ನಾನು ಫೆಬ್ರವರಿಯಲ್ಲಿ ನಿಶ್ಚಿತಾರ್ಥವೂ ಆಗೋದಿಲ್ಲ, ಮದುವೆಯೂ ಆಗೋದಿಲ್ಲ. 2 ವರ್ಷಗಳಿಂದ ಮಾಧ್ಯಮಗಳು ನನಗೆ ಮದುವೆ ಮಾಡಿಸಲು ನೋಡುತ್ತಿವೆ. ಪ್ರತಿ ವರ್ಷವೂ ಮದುವೆಯ ವದಂತಿ ಕೇಳಿ ಬರುತ್ತಿದೆ.

ಅವರು(ಮಾಧ್ಯಮಗಳು) ನನ್ನನ್ನು ಹಿಡಿದು ಮದುವೆ ಮಾಡಿಸಲು ಕಾಯುತ್ತಿದ್ದಾರೆ ಎಂದು ಮಾಧ್ಯಮಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ವಿಜಯ್ ದೇವರಕೊಂಡ ಹಾಗೂ ರಶ್ಮಿಕ ಮಂದಣ್ಣ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವದಂತಿ ಹಬ್ಬಿದ್ದವು.  ಈ ವದಂತಿಯನ್ನು ಇದೀಗ ವಿಜಯ್ ದೇವರಕೊಂಡ ನಿರಾಕರಿಸಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ, ಗೀತ ಗೋವಿಂದಂ, ಡಿಯರ್ ಕಾಮ್ರೆಡ್ ಚಿತ್ರಗಳಲ್ಲಿ ನಟಿಸಿದ್ದರು. ಈ ಎರಡೂ ಚಿತ್ರಗಳು ಹಿಟ್ ಆಗಿದ್ದವು. ಜೊತೆಯಾಗಿ ನಟಿಸಿದ ನಟ ನಟಿ ಮದುವೆ ಆಗ್ತಾರೆ ಅಂತ ಕೆಲವೊಂದು ಮಾಧ್ಯಮಗಳಲ್ಲಿ ನಿರಂತರವಾಗಿ ವದಂತಿಗಳು ಪ್ರಸಾರವಾಗುತ್ತಿತ್ತು. ಜೊತೆಯಾಗಿ ನಟಿಸಿದ ಮಾತ್ರಕ್ಕೆ ನಟ ನಟಿ ಮದುವೆ ಆಗಲೇ ಬೇಕೆ? ಅನ್ನೋ ಪ್ರಶ್ನೆಗಳು ಇದೀಗ ಕೇಳಿ ಬರುತ್ತಿದ್ದು, ಈ ವಿಚಾರ ನಗೆಪಾಟಲಿಗೀಡಾಗಿದೆ.

ಇತ್ತೀಚಿನ ಸುದ್ದಿ