ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪಾದಸ್ಪರ್ಶಿಸಲು ಯತ್ನಿಸಿದ ಇಂಜಿನಿಯರ್ ಅಮಾನತು
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪಾದಸ್ಪರ್ಶಿಸಲು ಮುಂದಾದ ಇಂಜಿನಿಯರ್ ಓರ್ವರನ್ನು ಅಮಾನತುಗೊಳಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಜ.04 ರಂದು ನಡೆದ ಕಾರ್ಯಕ್ರಮದಲ್ಲಿ ಇಂಜಿನಿಯರ್ ದ್ರೌಪದಿ ಮುರ್ಮು ಅವರ ಪಾದ ಸ್ಪರ್ಶಿಸುವುದಕ್ಕೆ ಇಂಜಿನಿಯರ್ ಯತ್ನಿಸಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭದ್ರತೆಯನ್ನು ಉಲ್ಲಂಘಿಸಿ ಅವರ ಪಾದಸ್ಪರ್ಶಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಇಂಜಿನಿಯರ್ ನ್ನು ಅಮಾನತುಗೊಳಿಸಲಾಗಿದೆ.
ಪಿಹೆಚ್ ಇಡಿಯ ಕಿರಿಯ ಇಂಜಿನಿಯರ್ ಜನವರಿ4 ರಂದು ನಡೆದ ಸ್ಕೌಟ್ ಗೈಡ್ ಜಾಂಬೊರಿ ಕಾರ್ಯಕ್ರಮದ ಉದ್ಘಾಟನೆ ವೇಳೆ ಭದ್ರತೆ ನಿಯಮಗಳನ್ನು ಉಲ್ಲಂಘಿಸಿ ಪಾದ ಸ್ಪರ್ಶಿಸಲು ಮುಂದಾಗಿದ್ದರು. ಕೇಂದ್ರ ಗೃಹ ಸಚಿವಾಲಯ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಇಲಾಖೆಯ ಇಂಜಿನಿಯರ್ ನ್ನು ಅಮಾನತುಗೊಳಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw