ಕಾಲೇಜು ಶುಲ್ಕ ಪಾವತಿಸಲು ಕೂಲಿ ಕಾರ್ಮಿಕಳಾಗಿ ಬದಲಾದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ! - Mahanayaka
9:30 AM Thursday 14 - November 2024

ಕಾಲೇಜು ಶುಲ್ಕ ಪಾವತಿಸಲು ಕೂಲಿ ಕಾರ್ಮಿಕಳಾಗಿ ಬದಲಾದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ!

11/02/2021

ಒಡಿಶಾ: ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ತನ್ನ ಕಾಲೇಜು ಶುಲ್ಕವನ್ನು ಬರಿಸಲು ಕೂಲಿ ಕಾರ್ಮಿಕೆಯಾಗಿ ದುಡಿಯುತ್ತಿರುವ ಘಟನೆ ಒಡಿಶಾದ ಪುರಿಯಲ್ಲಿ ನಡೆದಿದ್ದು,  ಕಾಲೇಜು ಶುಲ್ಕವನ್ನು ಪಾವತಿಸದ ಹಿನ್ನೆಲೆಯಲ್ಲಿ ಆಕೆಯ ಡಿಪ್ಲೊಮಾ ಪ್ರಮಾಣ ಪತ್ರವೂ ಆಕೆಯ ಕೈಗೆ ಇನ್ನೂ ಸಿಕ್ಕಿಲ್ಲ.

ಪರಿಶಿಷ್ಟ ಜಾತಿಗೆ ಸೇರಿದ ಬಡ ಕುಟುಂಬದ 20 ವರ್ಷದ ರೋಸಿ ಬೆಹರಾ ಅವರ ನೈಜ ಕಥೆ ಇದಾಗಿದೆ. ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದರೂ ಇವರು, ತಮ್ಮ ಕಾಲೇಜು ಶುಲ್ಕವನ್ನು ಪಾವತಿಸಲು ಕೂಲಿ ಕಾರ್ಮಿಕೆಯಾಗಿ ಬದಲಾವಣೆಯಾಗಬೇಕಾದ ಪ್ರಸಂಗ ಬಂದೊದಗಿದೆ.

ಕಾಲೇಜು ಶುಲ್ಕವನ್ನು ಪಾವತಿಸದ ಹಿನ್ನೆಲೆಯಲ್ಲಿ ರೋಸಿಗೆ ಇನ್ನೂ ಡಿಪ್ಲೊಮೋ ಪ್ರಮಾಣ ಪತ್ರ ನೀಡಲಾಗಿಲ್ಲ. ಇದರ ಜೊತೆಗೆ ಮುಂದಿನ ವಿದ್ಯಾಭ್ಯಾಸ ನಡೆಸುವ ಸವಾಲು ಕೂಡ ರೋಸಿಯ ಮುಂದಿದೆ. ಹೀಗಾಗಿ ಆಕೆ ದಿನ ಕೂಲಿ ಕಾರ್ಮಿಕಳಾಗಿ ದುಡಿಯುವ ಅನಿವಾರ್ಯ ಪರಿಸ್ಥಿತಿ ಬಂದಿದೆ.

2019ರಲ್ಲಿ ಸಿವಿಲ್ ಇಂಜಿನಿಯರಿಂಗ್ ನಲ್ಲಿ ನಾನು ಡಿಪ್ಲೊಮಾ ಮುಗಿಸಿದ್ದು, ಆದರೆ ಡಿಪ್ಲೊಮಾ ಮಾಡುತ್ತಿದ್ದ ಸಂದರ್ಭದಲ್ಲಿ ಕಾಲೇಜಿಗೆ 24,500 ರೂಗಳನ್ನು ಪಾವತಿಸಿಲ್ಲ. ಇನ್ನೂ ಮುಂದೆ ಸ್ನಾತಕ್ಕೋತ್ತರ ಪದವಿ ಮಾಡಲು ಕೂಡ ನಾನು ಹಣ ಹೊಂದಿಸುತ್ತಿದ್ದೇನೆ. ಅದಕ್ಕಾಗಿ ದಿನಗೂಲಿ ಕಾರ್ಮಿಕಳಾಗಿ ತಾನು ದುಡಿಯುತ್ತಿದ್ದೇನೆ ಎಂದು ರೋಸಿ ಬೆಹೆರಾ ತಿಳಿಸಿದ್ದಾರೆ.




ಇನ್ನೂ ಈ ಬಗ್ಗೆ ಮಾಹಿತಿ ಪಡೆದ ಡೆಲಾಂಗ್ ಬ್ಲಾಕ್‌ ನ  ಕಲ್ಯಾಣ ವಿಸ್ತರಣಾಧಿಕಾರಿ, ಹಣ ಕಾಸಿನ ಪರಿಸ್ಥಿತಿಯಿಂದಾಗಿ ಆಕೆ ಕಾಲೇಜು ಶುಲ್ಕ ಪಾವತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆಕೆಯ ಪ್ರಮಾಣ ಪತ್ರ ಕೂಡ ಸಿಕ್ಕಿಲ್ಲ. ಈ ಬಗ್ಗೆ ನಾವು ಪರಿಶೀಲಿಸುತ್ತೇವೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ