ಎಂಜಿನ್ ಕೆಟ್ಟಿರುವ ಡಬ್ಬಾ ಸರ್ಕಾರ: ಸಿದ್ದರಾಮಯ್ಯ - Mahanayaka

ಎಂಜಿನ್ ಕೆಟ್ಟಿರುವ ಡಬ್ಬಾ ಸರ್ಕಾರ: ಸಿದ್ದರಾಮಯ್ಯ

siddaramaiha
07/03/2022

ಬೆಂಗಳೂರು: ಕರ್ನಾಟಕ ವಿಧಾನ ಮಂಡಳದ ಬಜೆಟ್ ಅಧಿವೇಶನ ಸೋಮವಾರ ಪುನರಾರಂಭಗೊಂಡಿದ್ದು, ಚರ್ಚೆಯನ್ನು ಆರಂಭಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ , ಚರ್ಚೆಯ ಆರಂಭದಲ್ಲಿಯೇ ರಾಜ್ಯ ಸರ್ಕಾರದ ಕಾರ್ಯವೈಖರಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟೀಕಿಸಿದ್ದಾರೆ.

ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್, ಬೊಮ್ಮಾಯಿ ಅವರನ್ನು ನಿಮ್ಮ ಫ್ರೆಂಡ್ ಎಂದು ಹೇಳುತ್ತಾ, ಏಕೆ ಹೀಗೆಲ್ಲಾ ಟೀಕಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸ್ನೇಹ ಬೇರೆ, ರಾಜಕಾರಣ ಬೇರೆ, ಸಿದ್ಧಾಂತ ಬೇರೆ. ನೀವು ಆರ್​ಎಸ್ಎಸ್ ನಿಂದ ಬಂದವರು, ನಿಮ್ಮ ವೈಚಾರಿಕ ಸಿದ್ದಾಂತ ಬೇರೆ, ನಮ್ಮ ಸಿದ್ದಾಂತ ಬೇರೆ. ಹೊರಗೆ ಸ್ನೇಹ ಇದ್ದೇ ಇರುತ್ತದೆ, ಇಲ್ಲಿ ರಾಜಕಾರಣ ಇದ್ದೇ ಇರುತ್ತದೆ ಎಂದರು.

ಬಿಜೆಪಿಯವರು ಇದು ಡಬಲ್ ಎಂಜಿನ್ ಸರ್ಕಾರ ಎಂದು ಹೇಳುತ್ತಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಸ್ವರ್ಗವೇ ನಿರ್ಮಾಣ ಆಗುತ್ತದೆ ಎಂದು ಇವರು ಹೇಳುತ್ತಿದ್ದರು. ಆದರೆ ಎಂಜಿನ್ ಕೆಟ್ಟಿರುವುದರಿಂದ ಇದು ಡಬ್ಬಾ ಸರ್ಕಾರ ಆಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಲು ಎದ್ದ ವೇಳೆ ಸಚಿವರಾದ ಆರ್.ಅಶೋಕ್, ಮುನಿರತ್ನ ಸದನದಿಂದ ಹೊರ ನಡೆಯಲು ಮುಂದಾದರು.




ಈ ವೇಳೆ ‘ಹೇ ಮುನಿರತ್ನ, ಅಶೋಕ್ ಕುಳಿತುಕೊಳ್ಳಿ’ ಎಂದು ಸಿದ್ದರಾಮಯ್ಯ ಕೂಗಿ ಹೇಳಿದರು. ಇದಕ್ಕೆ ಅಶೋಕ್ ನಾನು ನೀರು ಕುಡಿಯೋಕೆ ಹೋಗ್ತಿದ್ದೇನೆ ಎಂದು ಉತ್ತರಿಸಿದರು. ಆಗ ಸಿದ್ದರಾಮಯ್ಯ ಅವರು ಇಲ್ಲಿಗೇ ನೀರು ಕೊಡ್ತಾರೆ ಕೂತ್ಕೊಳಪ್ಪ ಎಂದು ತಿಳಿಸಿದರು. ಸಿದ್ದರಾಮಯ್ಯ ಅವರು ಈ ರೀತಿ ಹೇಳುತ್ತಲೇ ಅಲ್ಲೇ ಅಶೋಕ್ ಕುಳಿತಿದ್ದಾರೆ.

ಈ ವೇಳೆ ಬಿಎಸ್‍ವೈ ಮಧ್ಯಪ್ರವೇಶಿಸಿ, ಅವರು ಸುಮ್ಮನೆ ಹೊರಗೆ ಹೋಗ್ತಿದ್ರು, ನೀರು ಕುಡಿಯಲು ಹೋಗ್ತಿರಲಿಲ್ಲ. ನೀವು ಹೇಳಿದ್ಮೇಲೆ ಅಶೋಕ್ ಕೂತ್ಕೊಂಡ್ರು ಎಂದು ಕಿಚಾಯಿಸಿದರು. ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಹೌದು ನೀವು ಹಿಂದೆ ಕುಳಿತಿದ್ದೀರಿ, ಇಂತದ್ದನ್ನೆಲ್ಲ ಗಮನಿಸುತ್ತೀರಿ ಅಂತಾ ಗೊತ್ತು ಎಂದು ಕಾಲೆಳೆದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಷ್ಯಾದ ಎರಡು ಯುದ್ಧ ವಿಮಾನ ಹೊಡೆದುರುಳಿಸಿದ ಉಕ್ರೇನ್: ಓರ್ವ ಪೈಲಟ್ ಸಾವು

ಪ್ರತಿಭಟನಾ ನಿರತ ಹಿಂದೂ ಕಾರ್ಯಕರ್ತರ ಮೇಲೆ ಜೇನು ದಾಳಿ

ಎನ್‌ ಎಸ್‌ ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಬಂಧನ

ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ

ಭಾರತದ ಪ್ಯಾಲೆಸ್ಟೈನ್​​​ ರಾಯಭಾರಿ ಮುಕುಲ್ ಆರ್ಯ ನಿಗೂಢ ಸಾವು

 

ಇತ್ತೀಚಿನ ಸುದ್ದಿ