ಇನ್ನೊಬ್ಬರ ಬಗ್ಗೆ ಮಾತಾಡಬೇಕಾದ್ರೆ ಯೋಚಿಸಿ ಮಾತನಾಡಿ  | ದರ್ಶನ್ ಗೆ ನಟ ಪ್ರೇಮ್ ತಿರುಗೇಟು - Mahanayaka
12:47 PM Tuesday 16 - September 2025

ಇನ್ನೊಬ್ಬರ ಬಗ್ಗೆ ಮಾತಾಡಬೇಕಾದ್ರೆ ಯೋಚಿಸಿ ಮಾತನಾಡಿ  | ದರ್ಶನ್ ಗೆ ನಟ ಪ್ರೇಮ್ ತಿರುಗೇಟು

preem darshan
18/07/2021

ಸಿನಿಡೆಸ್ಕ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿರ್ದೇಶಕ ಪ್ರೇಮ್ ಅವರಿಗೆ ಪುಡುಂಗು ಎಂಬ ಪದ ಬಳಕೆ ಮಾಡಿದ ವಿಚಾರವಾಗಿ ಪ್ರೇಮ್ ಪ್ರತಿಕ್ರಿಯಿಸಿದ್ದು, ನಟ ದರ್ಶನ್ ಅವರಿಗೆ ಪತ್ರ ಬರೆದು ಟ್ವೀಟ್ ಮಾಡಿದ್ದಾರೆ.


Provided by

ದರ್ಶನ್ ಅವರೇ ನಾನು ‘ಕರಿಯಾ’ ಸಿನಿಮಾ ಮಾಡಬೇಕಾದರೆ ಯಾವ ‘ಪುಡುಂಗುನೂ’ ಅಲ್ಲ ನನ್ ಕೊಂಬೂ ಇರಲಿಲ್ಲ. ಒಬ್ಬ ಸಾಮಾನ್ಯ ನಿರ್ದೇಶಕ. ರಾಜ್‌ ಕುಮಾರ್‌, ಅಂಬರೀಶ್‌, ವಿಷ್ಣುವರ್ಧನ್‌ ಹಾಗೂ ರಜನಿಕಾಂತ್‌ ರವರು ಒಳ್ಳೆ ನಿರ್ದೇಶಕ ಎಂದು ಬೆನ್ನುತಟ್ಟಿದ್ದರು. ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಅಂತ ಬಿರುದು ಕೊಟ್ಟರು. ಆದರೂ ನನಗೆ ಕೊಂಬು ಬರ್ಲಿಲ್ಲ. ನಾನು ನನ್ನದೇ ಆದ ಸ್ಟೈಲ್‌ ನಲ್ಲಿ ಸಿನಿಮಾ ಮಾಡಿಕೊಂಡು ಬಂದವನು ಎಂದು ಪತ್ರದಲ್ಲಿ ಹೇಳಿದ್ದಾರೆ.

ಸುಮಾರು ನಿರ್ಮಾಪಕರು, ನಿಮ್ಮ ಅಭಿಮಾನಿಗಳು ಹಾಗೂ ನನ್ನ ಅಭಿಮಾನಿಗಳು ನಿಮ್ಮ ಕಾಂಬಿನೇಶನ್‌ ನಲ್ಲಿ ಯಾವಾಗ ಚಿತ್ರ ಮಾಡ್ತೀರ ಎಂದು ಕೇಳ್ತಾನೆ ಇದ್ದರು. ಇದರ ಬಗ್ಗೆ ನಿಮಗೂ ಗೊತ್ತು, ನನಗೂ ಗೊತ್ತು. ಇಬ್ಬರು ಸೇರಿ ಸಿನಿಮಾ ಮಾಡುವುದರ ಬಗ್ಗೆ ಚರ್ಚೆ ಮಾಡಿದ್ದೆವು. ನಾನು ನಮ್ ಬ್ಯಾನರ್‌ನಲ್ಲಿ ಸಿನಿಮಾ ಮಾಡಿ, ಇಲ್ಲ ನಿಮ್ ಬ್ಯಾನರ್‌ನಲ್ಲಿ ಸಿನಿಮಾ ಮಾಡಿ ಎಂದು ಚರ್ಚೆ ಮಾಡಿದ್ದೆವು. ನನಗೆ ಉಮಾಪತಿಯವರು ನೀವು ಹಾಗೂ ದರ್ಶನ್ ಸೇರಿ ನನಗೆ ಸಿನಿಮಾ ಮಾಡಿಕೊಡಿ ಎಂದು ಕೇಳಿದ್ದರು. ಅದಕ್ಕೆ ನಾನು ಉಮಾಪತಿ ಅವರನ್ನು ನಿಮಗೆ ಪರಿಚಯ ಮಾಡಿದ್ದೆ. ಮೂರು ಜನ ಸೇರಿ ಸಿನಿಮಾ ಮಾಡೋಣ ಅಂತ ತೀರ್ಮಾನ ಮಾಡಿದ್ದೆವು. ಆದ್ರೆ ನನ್ನ ‘ದಿ ವಿಲನ್’ ಸಿನಿಮಾದ ಕಾರಣಕ್ಕೆ ನಾನೇ ಉಮಾಪತಿ ಅವರಿಗೆ ಹೇಳಿ ಬೇರೆ ನಿರ್ದೇಶಕರನ್ನ ಹಿಡಿದು ಸಿನಿಮಾ ಮಾಡಿ ಅಂತ ಹೇಳಿದ್ದೆ. ನನ್ನ ಸಂಭಾವನೆಯನ್ನು ಉಮಾಪತಿ ಅವರಿಗೆ ವಾಪಸ್ ನೀಡಿ, ‘ರಾಬರ್ಟ್’ ಸಿನಿಮಾವನ್ನು ಹಾರೈಸಿದವನು ನಾನು. ಅದೇ ರೀತಿ ‘ರಾಬರ್ಟ್’ ಹಿಟ್‌ ಆಯಿತು. ಇದರ ಮಧ್ಯೆ ನನ್ನ ಹೆಸರು ಯಾಕೆ ದರ್ಶನ್ ಅವರೇ?  ಎಂದು ಅವರು ಪ್ರಶ್ನಿಸಿದ್ದಾರೆ.

ಇನ್ನೂ, ನಿರ್ದೇಶಕರು ಯಾವ ಪುಡುಂಗುಗಳು ಅಲ್ಲ. ಅವರಿಗೆ ಕೊಂಬು ಇರುವುದಿಲ್ಲ. ತೆರೆಮೇಲೆ ಒಬ್ಬ ನಟನನ್ನು ಹುಟ್ಟುಹಾಕಿ, ಅವನಿಗೆ ಕೊಂಬು ಬರಬೇಕಾದರೆ ನಿರ್ದೇಶಕರ ಶ್ರಮ ಎಷ್ಟಿರುತ್ತದೆ ಎಂದು ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು. ಅದು ನಿಮಗೂ ಗೊತ್ತು. ಇನ್ನೊಬ್ಬರ ಬಗ್ಗೆ ಮಾತಾಡಬೇಕಾದ್ರೆ ಯೋಚಿಸಿ ಮಾತನಾಡಿ Thank you for your kind words. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.

2003ರಲ್ಲಿ ಬಿಡುಗಡೆಯಾಗಿದ್ದ ದರ್ಶನ್‌ ನಟನೆಯ ಸೂಪರ್‌ ಡೂಪರ್‌ ಹಿಟ್‌ ಚಿತ್ರ ‘ಕರಿಯಾ’ವನ್ನು ಪ್ರೇಮ್‌ ನಿರ್ದೇಶಿಸಿದ್ದರು. ‘ಕರಿಯಾ’ ಸಿನಿಮಾ ಪ್ರೇಮ್‌ ಮತ್ತು ದರ್ಶನ್‌ ಇಬ್ಬರಿಗೂ ಬಹುದೊಡ್ಡ ಹೆಸರು ತಂದುಕೊಟ್ಟಿತ್ತು.

ಇನ್ನಷ್ಟು ಸುದ್ದಿಗಳು

 

ಅಪ್ರಾಪ್ತೆಗೆ ಮದುವೆಯಾದರೂ ಸಂಬಂಧ ಮುಂದುವರಿಸಿದ ವಿದ್ಯಾರ್ಥಿ | ಪತಿಗೆ ತಿಳಿದಾಗ ನಡೆದದ್ದೇನು ಗೊತ್ತಾ?

ಮುಖಕ್ಕೆ ಹಾಕುವ ಮಾಸ್ಕ್ ನ್ನು ಬಿಜೆಪಿ ಸಚಿವ ಹಾಕಿದ್ದೆಲ್ಲಿಗೆ ಗೊತ್ತಾ? | ಫೋಟೋ ವೈರಲ್

“ಎಣ್ಣೆ ಹೊಡೆದ ಮತ್ತಿನಲ್ಲಿ ದರ್ಶನ್ ಹೊಡೆದ್ಬಿಟ್ಟಿದ್ದಾರೆ” | ಮತ್ತೆ ಕಿಡಿ ಹತ್ತಿಸಿತು ಪ್ರತ್ಯಕ್ಷದರ್ಶಿಯ ಹೇಳಿಕೆ

ಕನ್ನಡ ಅರ್ಥ ಆಗುತ್ತೆ, ಕನ್ನಡದಲ್ಲೇ ಪ್ರಶ್ನೆ ಕೇಳಿ ಎಂದ ತಮಿಳುನಟ ವಿಜಯ್ ಸೇತುಪತಿ!

ಬಾಲಕಿಗೆ ಕಿರುಕುಳ; ತಡೆಯಲು ಯತ್ನಿಸಿದಾಗ ಆಕೆಯ ಮುಖಕ್ಕೆ ಇರಿದ ದುಷ್ಟ!

ಇತ್ತೀಚಿನ ಸುದ್ದಿ