ಬರೇ ನಾಲ್ವರಲ್ಲ, ಇನ್ನೂ ಹಲವರ ಬಾಳಿಗೆ ಬೆಳಕಾಗಲಿದೆ ಅಪ್ಪುವಿನ ಕಣ್ಣುಗಳು
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕಣ್ಣು ದಾನ ಮಾಡಿದ ಬೆನ್ನಲ್ಲೇ ಕಣ್ಣುದಾನ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ನಡುವೆ ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳು ನಾಲ್ವರು ಅಂಧರ ಬಾಳಿಗೆ ಬೆಳಕಾಗಿದ್ದು, ಅವರಿಗೆ ದೃಷ್ಟಿ ಮರಳಿದೆ.
ಸದ್ಯ ವೈದ್ಯರು ಹೇಳು ಪ್ರಕಾರ, ಪುನೀತ್ ರಾಜ್ ಕುಮಾರ್ ಕಣ್ಣುಗಳು ಕೇವಲ ನಾಲ್ವರಿಗೆ ಮಾತ್ರ ಬೆಳಕು ನೀಡಿರುವುದಲ್ಲ, ಇನ್ನಷ್ಟು ಜನರಿಗೆ ದೃಷ್ಟಿ ನೀಡಲು ಅಪ್ಪುವಿನ ಕಣ್ಣು ಸಹಕಾರಿಯಾಗಲಿದೆ. ಇನ್ನೂ ಹಲವು ಅಂಧರಿಗೆ ಅಪ್ಪು ಕಣ್ಣುಗಳ ಭಾಗಗಳಿಂದ ದೃಷ್ಟಿ ನೀಡಲು ವೈದ್ಯರು ಮುಂದಾಗಿದ್ದಾರೆ.
ಅಪ್ಪ ನೇತ್ರದಾನ ಮಾಡಿದ ಬಳಿಕ ವೈದ್ಯಕೀಯ ಕ್ಷೇತ್ರದ ನವೀನ ಆವಿಷ್ಕಾರಗಳನ್ನು ಬಳಸಿಕೊಂಡು ನಾಲ್ವರಿಗೆ ದೃಷ್ಟಿ ನೀಡಲಾಗಿತ್ತು ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ,ಭುಜಂಗ ಶೆಟ್ಟಿ ಮಾಹಿತಿ ನೀಡಿದ್ದರು. ಆದರೆ, ಅಪ್ಪು ಅವರ ಕಣ್ಣುಗಳ ಭಾಗಗಳು ಇನ್ನೂ ಕೂಡ ಇವೆ. ಅಪ್ಪು ಕಣ್ಣಿನ ಸುತ್ತ ಇರುವ ರಿಮ್ (ಕಣ್ಣಿನ ಪದರಗಳಲ್ಲಿ ಒಂದು)ನ್ನು ಸುರಕ್ಷಿತವಾಗಿ ಲ್ಯಾಬ್ ನಲ್ಲಿ ತೆಗೆದಿರಿಸಲಾಗಿದೆ. ಇದನ್ನು ಆ್ಯಸಿಡ್, ಸುಣ್ಣ, ಪಟಾಕಿಗಳಿಂದ ಕಣ್ಣು ಹಾನಿಗೊಳಲಾಗಿರುವ ರೋಗಿಗಳಿಗೆ ಅಳವಡಿಸಲಾಗುತ್ತದೆ ಎಂದು ಭುಜಂಗ ಶೆಟ್ಟಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka