ಇನ್ನು ನಾಲ್ಕು ವರ್ಷಗಳಲ್ಲಿ ಮನೆ ಮನೆಗಳಲ್ಲಿ ಆರೆಸ್ಸೆಸ್: ಮೋಹನ್ ಭಾಗವತ್ - Mahanayaka
1:11 PM Wednesday 10 - September 2025

ಇನ್ನು ನಾಲ್ಕು ವರ್ಷಗಳಲ್ಲಿ ಮನೆ ಮನೆಗಳಲ್ಲಿ ಆರೆಸ್ಸೆಸ್: ಮೋಹನ್ ಭಾಗವತ್

mohan bhagwat
11/09/2021

ರಾಂಚಿ: ಇನ್ನು ನಾಲ್ಕು ವರ್ಷದ ಬಳಿಕ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ದೇಶದ ಮನೆ ಮನೆಯನ್ನೂ ಆರೆಸ್ಸೆಸ್ ತಲುಪಿರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.


Provided by

ಜಾರ್ಖಂಡ್ ನಲ್ಲಿ ಸಂಘದ ಅವಲೋಕನಕ್ಕಾಗಿ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಮೋಹನ್ ಭಾಗವತ್ ಜಾರ್ಖಾಂಡ್ ಹಾಗೂ ಬಿಹಾರದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. 2025ರಲ್ಲಿ  ಸಂಘಕ್ಕೆ 100 ವರ್ಷವಾಗಲಿದೆ. ಈ ಸಂದರ್ಭದಲ್ಲಿ ಸ್ವಯಂ ಸೇವಕರು ಎಲ್ಲ ಗ್ರಾಮಗಳಲ್ಲಿಯೂ ಶಾಖೆಗಳ ವಿಸ್ತರಣೆ ಮಾಡುವ ಮೂಲಕ ಪ್ರತಿ ಮನೆಗೂ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಆರೆಸ್ಸೆಸ್ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಆರೆಸ್ಸೆಸ್ ಸಭೆಯಲ್ಲಿ ಸದಸ್ಯರಿಗೆ ಹಲವಾರು ನಿರ್ದೇಶನಗಳಲ್ಲಿ ನೀಡಲಾಗಿದೆ. ಸದಸ್ಯರ ನಡವಳಿಕೆ ಹೇಗಿರಬೇಕು ಮತ್ತು ಅವರ ಜೀವನವನ್ನು ರಾಷ್ಟ್ರ ನಿರ್ಮಾಣಕ್ಕೆ ಹೇಗೆ ಬಳಸಬೇಕು ಎಂಬ ಬಗ್ಗೆ ತಿಳಿಸಲಾಗಿದೆ. ಇನ್ನೂ ಶನಿವಾರ ಈ ಬಗ್ಗೆ ಮೋಹನ್ ಭಾಗವತ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಲಿದ್ದಾರೆ.

ಇನ್ನಷ್ಟು ಸುದ್ದಿಗಳು…

33 ತಾಸುಗಳ ಜೀವನ್ಮರಣ ಹೋರಾಟದ ಬಳಿಕ ಸಾವಿಗೀಡಾದ ಅತ್ಯಾಚಾರ ಸಂತ್ರಸ್ತೆ!

ಇಡೀ ತೋಟವನ್ನೇ ನಾಶ ಮಾಡಿದ ಆನೆ, ಪುಟ್ಟ ಹಕ್ಕಿ ಗೂಡು ಇದ್ದ ಬಾಳೆಗಿಡವನ್ನು ಬಿಟ್ಟು ಹೋಯಿತು!

ಬಿಜೆಪಿ ಆಡಳಿತದಲ್ಲಿಯೇ ದೇವಸ್ಥಾನ ನೆಲಸಮ: ಬೇರೆ ಸರ್ಕಾರ ಇದ್ದಿದ್ದರೆ ನಡೆಯುತ್ತಿದ್ದದ್ದೇ ಬೇರೆ!

ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿರುವ ಪ್ರಿಯಾಂಕ ಟಿಬ್ರೆವಾಲ್ ಹಿನ್ನೆಲೆ ಏನು ಗೊತ್ತೆ?

ಬೈಕ್ ಸ್ಕಿಡ್ ಆಗಿ ಖ್ಯಾತ ನಟನಿಗೆ ಗಂಭೀರ ಗಾಯ: ಅಪೋಲೊ ಆಸ್ಪತ್ರೆಗೆ ದೌಡಾಯಿಸಿದ ಹಿರಿಯ ನಟರು

ಬಲೆಗೆ ಬಿದ್ದ ವಿಚಿತ್ರ ಬೃಹತ್ ಮೀನನ್ನು ಕಂಡು ಬೆಚ್ಚಿ ಬಿದ್ದ ಮೀನುಗಾರರು !

ಯುವತಿಯನ್ನು ಅತ್ಯಾಚಾರ ಎಸಗಿ ಪರಾರಿಯಾದ ಗ್ರಾಮ ಲೆಕ್ಕಾಧಿಕಾರಿ!

ಇತ್ತೀಚಿನ ಸುದ್ದಿ