ಹೃದಯ ವಿದ್ರಾವಕ ಘಟನೆ: ಬಿಜೆಪಿ ಮುಖಂಡ ಸಹಿತ ಇಡೀ ಕುಟುಂಬ ಸಾವಿಗೆ ಶರಣು!
ವಿದಿಶಾ: ಬಿಜೆಪಿ ಮಾಜಿ ಕೌನ್ಸಿಲರ್ ವೊಬ್ಬರು ತಮ್ಮ ಕುಟುಂಬ ಸಹಿತವಾಗಿ ಸಾವಿಗೆ ಶರಣಾಗಿರುವ ಘಟನೆ ವಿದಿಶಾ ನಗರದ ಬಂಟಿ ನಗರದಲ್ಲಿ ನಡೆದಿದ್ದು, ತಮ್ಮ ಸಾವಿಗೂ ಮುನ್ನ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಾವಿಗೆ ಕಾರಣ ತಿಳಿಸಿದ್ದಾರೆ.
ಮಾಜಿ ಕಾರ್ಪೊರೇಟರ್ ಸಂಜೀವ್ ಮಿಶ್ರಾ(45), ಪತ್ನಿ ನೀಲಂ(42), ಮತ್ತು 13 ಮತ್ತು 7 ವರ್ಷದ ಇಬ್ಬರು ಪುತ್ರರು ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಸಂಜೀವ್ ಮಿಶ್ರಾ ಅವರು ತನ್ನ ಮಕ್ಕಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ನನ್ನ ಶತ್ರುಗಳಿಗೂ ಇಂತಹ ಕಾಯಿಲೆ ಬರಬಾರದು. ಮಕ್ಕಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಾವು ಬದುಕುಳಿಯುವುದಿಲ್ಲ ಎಂದು ಮಿಶ್ರಾ ಸಾವಿಗೆ ಕಾರಣ ತಿಳಿಸಿದ್ದಾರೆ.
ಮಿಶ್ರಾ ಅವರ ಮಕ್ಕಳು ಮಸ್ಕ್ಯುಲರ್ ಡಿಸ್ಟ್ರೋಫಿ ಎಂಬ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದರು. ಈ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಇವರ ಕುಟುಂಬ ಸಲ್ಫಾಸ್ ಮಾತ್ರೆಯನ್ನು ಸೇವಿಸಿ ಸಾವಿಗೆ ಶರಣಾಗಿದ್ದಾರೆ ಎಂದು ಇಲ್ಲಿನ ಜಿಲ್ಲಾಧಿಕಾರಿ ಉಮಾಶಂಕರ್ ಭಾರ್ಗವ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw