ಯುವತಿಯರು ಡ್ರೆಸ್ ಮಾಡುವ ಕೋಣೆಗೆ ಇಣುಕಿ ನೋಡಲು ಹೋದವನ ಪರಿಸ್ಥಿತಿ ಏನಾಯ್ತು ನೋಡಿ! - Mahanayaka

ಯುವತಿಯರು ಡ್ರೆಸ್ ಮಾಡುವ ಕೋಣೆಗೆ ಇಣುಕಿ ನೋಡಲು ಹೋದವನ ಪರಿಸ್ಥಿತಿ ಏನಾಯ್ತು ನೋಡಿ!

03/02/2021

ವಾಷಿಂಗ್ಟನ್: ಮಹಿಳೆಯರು ಡ್ರೆಸ್ ಮಾಡುವ ಕೋಣೆಗೆ ಇಣುಕಿ ವ್ಯಕ್ತಿಯೊಬ್ಬ ಸಿಕ್ಕಿಹಾಕಿಕೊಂಡ ಘಟನೆ ನಡೆದಿದ್ದು,  ಇದೀಗ ಈತ ಪೊಲೀಸರ ಅತಿಥಿಯಾಗಿದ್ದಾನೆ.  ಈ ಘಟನೆ ಅಮೆರಿಕದಲ್ಲಿ ನಡೆದಿದೆ. ಈತ ಮಹಿಳೆಯರು ಡ್ರೆಸ್ ಚೇಂಜ್ ಮಾಡುತ್ತಿದ್ದ ಕೋಣೆಗೆ ಇಣುಕುತ್ತಿದ್ದ ಸಂದರ್ಭದಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ.

ಬ್ರಿಯಾನ್ ಆಂಥೋನಿ ಜೋ(41) ಈ ಅತೀ ಬುದ್ಧಿವಂತ ಕ್ರಿಮಿನಲ್ ಆಗಿದ್ದಾನೆ.  ಶನಿವಾರ ಸ್ಟಾಫರ್ಡ್ ಕೌಂಟಿ ಒನೆಲೈಫ್ ಫಿಟ್ ನೆಸ್ ನಲ್ಲಿ ಈತ ಮಾಡಬಾರದ ಕೆಲಸ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಜಿಮ್ ನಲ್ಲಿ ಯುವತಿಯರು ಡ್ರೆಸ್ ಚೇಂಚ್ ಮಾಡುವ ರೂಮ್ ನ ಸೀಲಿಂಗ್ ನಲ್ಲಿ ಅಡಗಿ ಕುಳಿತು ಈತ ಕದ್ದು ನೋಡುತ್ತಿದ್ದ. ಓರ್ವ ಮಹಿಳೆ ಬಟ್ಟೆ ಬದಲಿಸುತ್ತಿದ್ದ ವೇಳೆ ಕದ್ದು ನೋಡುತ್ತಿದ್ದ ಜೋ, ನಿಯಂತ್ರಣ ಕಳೆದುಕೊಂಡು ಸೀಲಿಂಗ್ ನಿಂದ ಹತ್ತು ಅಡಿ ಕೆಳಗೆ ಬಿದ್ದಿದ್ದಾನೆ.

ಜೋ ಕೆಳಗೆ ಬೀಳುವ ಸಂದರ್ಭದಲ್ಲಿ ಬಟ್ಟೆ ಬದಲಿಸುತ್ತಿದ್ದ ಮಹಿಳೆಯ ಮೇಲೆಯೇ ಬಿದ್ದಿದ್ದಾನೆ. ತಕ್ಷಣವೇ ಈ ವಿಚಾರ ಸಿಬ್ಬಂದಿ ಗಮನಕ್ಕೆ ಬಂದಿದ್ದು, ಅವರು ಜೋನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.  ಜೋ ಹಾಗೂ ಯುವತಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ