ಸತ್ತಿದ್ದ ಹುಲಿ, ಚಿರತೆಯ ಅಕ್ರಮ ವಿಲೇವಾರಿ; ಪರಿಸರ ಹೋರಾಟಗಾರ ಹೂವರ್
ಚಾಮರಾಜನಗರ: ಮೇಲಾಧಿಕಾರಿಗಳ ಗಮನಕ್ಕೆ ತಾರದೇ ಮೃತಪಟ್ಟಿದ್ದ ಹುಲಿ ಹಾಗೂ ಚಿರತೆಯನ್ನು ಬಂಡೀಪುರದ ಮೊಳೆಯೂರು ವಲಯದ ಆರ್ ಎಫ್ ಒ ಪುಟ್ಟರಾಜು ಗುಟ್ಟಾಗಿ ಹೂತಿದ್ದಾರೆ ಎಂದು ಪರಿಸರ ಹೋರಾಟಗಾರ ಜೋಸೆಫ್ ಹೂವರ್ ಗಂಭೀರ ಆರೋಪ ಮಾಡಿದ್ದಾರೆ.
ಉರುಳಿಗೆ ಸಿಕ್ಕಿಬಿದ್ದಿದ್ದ ಹುಲಿ ಮತ್ತು ಅಂಗಚ್ಛೇಧಗೊಂಡ ಚಿರತೆಯ ಶವವನ್ನು ಮೊಳೆಯೂರು ಆರ್‌ಎಫ್‌ಒ ಪುಟ್ಟರಾಜು ಗುಟ್ಟಾಗಿ ಹೂತಿಟ್ಟಿದ್ದರು. ಈ ವಿಚಾರ ನಮ್ಮ ಗಮನಕ್ಕೆ ಬದಲಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೆ. ಜೊತೆಗೆ, 2022 ರ ನವೆಂಬರ್ ನಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಕೂಡ ಬರೆಯಲಾಗಿದ್ದರೂ ತನಿಖೆ ಮಾತ್ರ ಆಗಿಲ್ಲ ಎಂದು ಕಿಡಿಕಾರಿದ್ದಾರೆ.
ಆರ್ ಎಫ್ ಓ ಪುಟ್ಟರಾಜು ಮತ್ತು ನಮ್ಮನ್ನು ನಾರ್ಕೋ ಅನಾಲಿಸಿಸ್ ಪರೀಕ್ಷೆಗೆ ಒಳಪಡಿಸಿ ಸತ್ಯಾಂಶವನ್ನು ಸರ್ಕಾರ ಹೊರತೆಗೆಯಬೇಕು. ಹುಲಿ ಮತ್ತು ಚಿರತೆ ಶವಗಳನ್ನು ಅಕ್ರಮವಾಗಿ ವಿಲೇವಾರಿ ಮಾಡಿದ ಎಲ್ಲಾ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಹೂವರ್ ಆಗ್ರಹಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw