ಇಬ್ಬರ ಪ್ರಾಣ ಬಲಿ ಪಡೆದ ದುಬಾರಿ ಟೊಮೆಟೋ!
ಚಿಕ್ಕಬಳ್ಳಾಪುರ: ಟೊಮೆಟೊ ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ಬೇಲಿ ಸ್ಪರ್ಶಿಸಿ ಯುವಕನೋರ್ವ ಸಾವನ್ನಪ್ಪಿದ್ದು, ಇದರಿಂದ ರೊಚ್ಚಿಗೆದ್ದ ಯುವಕನ ಕುಟುಂಬಸ್ಥರು ಟೊಮೆಟೊ ತೋಟದ ಮಾಲಿಕನನ್ನು ಮನಸೋ ಇಚ್ಛೆ ಥಳಿಸಿ ಬರ್ಬವಾಗಿ ಹತ್ಯೆ ನಡೆಸಿದ್ದಾರೆ.
ತಾಲೂಕಿನ ಗೌರಿಬಿದನೂರು ತಾಲೂಕಿನ ಚಿರಕಮಟ್ಟೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 29 ವರ್ಷ ವಯಸ್ಸಿನ ವಸಂತ್ ರಾವ್ ತಂತಿಬೇಲಿ ಸ್ಪರ್ಶಿಸಿ ಮೃತಪಟ್ಟ ಯುವ ರೈತನಾಗಿದ್ದು, ಅಶ್ವಥ್ ರಾವ್ ಥಳಿತಕ್ಕೊಳಗಾಗಿ ಮೃತಪಟ್ಟ ತೋಟದ ಮಾಲಿಕನಾಗಿದ್ದಾನೆ.
ಟೊಮೆಟೊ ದರ ಹೆಚ್ಚಾಗಿರುವುದರಿಂದಾಗಿ ರೈತ ಅಶ್ವಥ್ ರಾವ್ ತಮ್ಮ ತೋಟಕ್ಕೆ ವಿದ್ಯುತ್ ಬೇಲಿಯನ್ನು ಅಳವಡಿಸಿದ್ದರು ಎನ್ನಲಾಗಿದೆ. ಚಿರಕಮಟ್ಟೇನಹಳ್ಳಿಯ ವಸಂತ್ ರಾವ್ ಅವರು ಬುಧವಾರ ರಾತ್ರಿ ವಿದ್ಯುತ್ ತಂತಿಯ ಅರಿವಿಲ್ಲದೇ ಟೊಮೆಟೊ ತೋಟಕ್ಕೆ ಹೋಗಿದ್ದು, ಈ ವೇಳೆ ತಂತಿ ಸ್ಪರ್ಶಿಸಿ ಅವರು ಮೃತಪಟ್ಟಿದ್ದಾರೆ.
ವಸಂತ್ ರಾವ್ ಸಾವಿಗೀಡಾಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ರೊಚ್ಚಿಗೆದ್ದ ಮೃತರ ಕುಟುಂಸ್ಥರು ಹಾಗೂ ಸಂಬಂಧಿಕರು ಗುರುವಾರ ಬೆಳಿಗ್ಗೆ ತೋಟದ ಮಾಲಿಕ ಅಶ್ವತ್ ರಾವ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಪರಿಣಾಮವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಮಂಚೇನ ಹಳ್ಳಿ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಶಾಕಿಂಗ್ ನ್ಯೂಸ್: ಕೈಯ ಮಣಿಕಟ್ಟು ಕೊಯ್ದುಕೊಂಡು ತಾಯಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆಗೆ ಶರಣು
ರೈಲಿನಡಿಗೆ ತಲೆಯಿಟ್ಟು ಪಿಯು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು!
ಜಾತಿ ಪ್ರಜ್ಞೆಯ ಬೇರುಗಳೂ ಮಾರುಕಟ್ಟೆಯ ಒತ್ತಡಗಳೂ | ವ್ಯವಸ್ಥೆಯನ್ನು ವಿಭಜಿಸುವ ಆಹಾರ ಶೋಷಿತರನ್ನು ಒಗ್ಗೂಡಿಸಲೂ ಸಾಧ್ಯ