ಬಿತ್ತನೆ  ಈರುಳ್ಳಿ  ನಾಟಿ  80 ದಿನ ಕಳೆದರು ಬಾರದ ಫಸಲು! - Mahanayaka
11:23 PM Tuesday 10 - December 2024

ಬಿತ್ತನೆ  ಈರುಳ್ಳಿ  ನಾಟಿ  80 ದಿನ ಕಳೆದರು ಬಾರದ ಫಸಲು!

chamarajanagara
13/01/2023

ಚಾಮರಾಜನಗರ, ಜ. 12- ಬಿತ್ತನೆ ಈರುಳ್ಳಿ ನಾಟಿ ಮಾಡಿ 80 ದಿನವಾದರು ಫಸಲು ಬರದೆ ರೈತ ಕಂಗಾಲಾಗಿರುವ ಘಟನೆ ತಾಲೂಕಿನ ಕಡುವಿನಕಟ್ಟೆ ಹುಂಡಿಯಲ್ಲಿ ನಡೆದಿದೆ.

ಗ್ರಾಮದ ಲೇಟ್ ಜವನೇಗೌಡರ  ಪುತ್ರರರಾದ ನಾಗರಾಜು ಮತ್ತು ಬಸವಣ್ಣ ಅವರು  ತಮ್ಮ ಬಾಬ್ತು  ಮೂರು  ಎಕರೆ ಜಮೀನಿನಲ್ಲಿ  ಸಣ್ಣ ಈರುಳ್ಳಿ  ನಾಟಿ ಮಾಡಿ  ಕೈ ಸುಟ್ಟಿ ಕೊಂಡಿದ್ದಾರೆ.  ಬಿತ್ತನೆ ನಾಟಿ ಈರುಳ್ಳಿಗೆ ಕ್ವಿಂಟಾಲ್ ಒಂದಕ್ಕೆ 7 ಸಾವಿರ ರೂ. ನೀಡಿ,  8 ಕ್ವಿಂಟಾಲ್  ನಾಟಿ ಈರುಳ್ಳಿಯನ್ನು ಖರೀದಿಸಿ  ಜಮೀನಿನಲ್ಲಿ  ನಾಟಿ ಮಾಡಿದ್ದಾರೆ. ಇದಕ್ಕೆ  ಬೇಕಾದ  ಗೊಬ್ಬರ, ಕ್ರಿಮಿನಾಶಕ  ಸೇರಿದಂತೆ  ಗೊಬ್ಬರದ ಅಂಗಡಿಯವರು ನೀಡುವ ಎಲ್ಲ ರೀತಿಯ ಔಷಧಿಗಳಲ್ಲಿ ಲಕ್ಷಾಂತರ ರೂ.  ಕೊಟ್ಟು ಖರೀದಿ ಮಾಡಿ ಕಾಲಕಾಲಕ್ಕೆ ಸಿಂಪಡಣೆ ಮಾಡಿದ್ದಾರೆ.  ಇಷ್ಟಾಗಿ ಫಸಲು ಬಹಳ ಅದ್ಬುತವಾಗಿದೆ ಬಂದಿದೆ. ಆದರೆ, ಈರುಳ್ಳಿ ಮಾತ್ರ ಭೂಮಿಯಲ್ಲಿ ಇಲ್ಲ. ಎಲ್ಲವು  ಸಹ ಬೇರಿನಿಂದ ಕೂಡಿದ್ದು ರೈತನಿಗೆ ಒಂದು ತಾನು ಹಾಕಿದ ಈರುಳ್ಳಿ ಸಹ ಸಿಗದಂತಾಗಿದೆ.

ರೈತರಾದ  ನಾಗರಾಜು ಮತ್ತು ಬಸವಣ್ಣ  ಅವರು ತಮ್ಮ  ಮೂರು ಎಕರೆ ಜಮೀನಲ್ಲಿ   ಸುಮಾರು ನಾಲ್ಕು ಲಕ್ಷ ರೂ ಗೂ ಹೆಚ್ಚು ಹಣವನ್ನು ಸಾಲ ಮಾಡಿ  ಸಣ್ಣ ಈರುಳ್ಳಿ ಬೆಳೆದಿದ್ದಾರೆ. ಅವರ  ನಿರೀಕ್ಷೆಯಂತೆ  80 ದಿನಕ್ಕೆ ಬರುವ ಫಸಲು ಅದಾಯ  ಕನಿಷ್ಟ  8 ಲಕ್ಷ ರೂ. ಆಗಬೇಕಾಗಿತ್ತು. ಈಗಿನ ದರದಲ್ಲಿ ಅಷ್ಟು ಹಣವು ಸಹ ಅವರ ಕೈ ಸೇರಬೇಕಾಗಿತ್ತು. ಬೆಳೆದ ಫಸಲಿನಲ್ಲಿ ಯಾವ ವ್ಯತ್ಯಾಸವಾಗಿದೆ ಎಂಬುವುದೇ ಅವರಿಗೆ ಅರ್ಥವಾಗುತ್ತಿಲ್ಲ.  ಎಲ್ಲವನ್ನು ಕ್ರಮಬದ್ದವಾಗಿ ಬೇಸಾಯ ಮಾಡಿದ್ದರು ಸಹ  ಫಸಲು  ಬಂದಿಲ್ಲ ಎಂಬ  ಚಿಂತೆ ಹಾಗು ಸಾಲಗಾರರಿಗೆ ಏನು ಉತ್ತರ ನೀಡಲಿ ಎಂಬ ಧಾವಂತದಲ್ಲಿ ಸಹೋದರರು ಇದ್ದಾರೆ.

ಸೂಕ್ತ ಪರಿಹಾರಕ್ಕೆ ರೈತರ ಆಗ್ರಹ : ಸರ್ಕಾರ ರೈತರಿಗೆ ವ್ಯವಸಾಯ ಮಾಡಿ  ಲಾಭ ಪಡೆಯಿರಿ. ಎಂದು ಹೇಳುವ ಮೂಲಕ ಅನೇಕ ಸವಲತ್ತು ಮತ್ತು  ಮಾರ್ಗದರ್ಶನವನ್ನು  ಇಲಾಖೆಯ ಮೂಲಕ ನೀಡುತ್ತಿದೆ. ಆದರೆ, ನಮಗೆ ಇಲಾಖೆಯಿಂದ ಯಾವ ರೀತಿಯ ಸ್ಪಂದನೆಯು  ಇಲ್ಲ.  ಕಚೇರಿಗೆ ಹೋದರು ನಮ್ಮನ್ನು ಹೇಳುವವರು ಎಂದು ಅಸಮಧಾನ ವ್ಯಕ್ತಪಡಿಸಿದರು.  ಹೀಗಾಗಿ ಕೂಡಲೇ ಸಂಬAಧ ಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ  ಬೆಳೆ ಪರಿಶೀಲನೆ ಮಾಡಬೇಕು. ತಮಗಾಗಿರುವ  ನಷ್ಟವನ್ನು ಭರಿಸಬೇಕು ಎಂದು  ಸಂಕಷ್ಟದಲ್ಲಿರುವ ರೈತರಾದ ನಾಗರಾಜು ಬಸವಣ್ಣ  ಮನವಿ ಮಾಡಿದರು.

ಇದು ನಮ್ಮ ಒಬ್ಬರ ರೈತರ ಕಥೆ ಅಲ್ಲ. ಬಹಳಷ್ಟು ರೈತರು ಸಣ್ಣ ಈರುಳ್ಳಿ ಬಿತ್ತನೆ ಮಾಡಿ,  ಫಸಲು ಬರುತ್ತಿಲ್ಲ.  ಇದನ್ನು ಕಟಾವು ಮಾಡುವ ಹಣ ಸಹ ದೊರೆಯುತ್ತಿಲ್ಲ. ಬಹಳಷ್ಟು ನಷ್ಟ ಉಂಟಾಗಿ, ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದಕ್ಕೆ ಕೃಷಿ ಮತ್ತು  ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ,  ಪರಿಶೀಲನೆ ಮಾಡಿ, ನಷ್ಟವನ್ನು ಭರಿಸಿಕೊಡಬೇಕು.  ಇಂಥ ಘಟನೆಗಳಿಂದ ರೈತರು ಅತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಇದನ್ನು ತಪ್ಪಿಸಲು ಸರ್ಕಾರ  ಸೂಕ್ತ  ಪರಿಹಾರ ನೀಡಬೇಕು ಎಂದು  ಅವರು ಮನವಿ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ