ಭಾರತದ ಈಶಾನ್ಯ ಭಾಗದಲ್ಲಿ ಕಂಪಿಸಿದ ಭೂಮಿ: ರಿಕ್ಟರ್​ ಮಾಪಕದಲ್ಲಿ 4.9 ತೀವ್ರತೆ ದಾಖಲು - Mahanayaka
11:43 AM Sunday 10 - November 2024

ಭಾರತದ ಈಶಾನ್ಯ ಭಾಗದಲ್ಲಿ ಕಂಪಿಸಿದ ಭೂಮಿ: ರಿಕ್ಟರ್​ ಮಾಪಕದಲ್ಲಿ 4.9 ತೀವ್ರತೆ ದಾಖಲು

earth
18/01/2022

ಬಸ್ಸಾರ್: ಇಂದು ಬೆಳ್ಳಂಬೆಳಗ್ಗೆ ಭಾರತದ ಈಶಾನ್ಯ ಭಾಗ ಅರುಣಾಚಲ ಪ್ರದೇಶದ ಬಸಾರ್ ​ದ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಈ ಘಟನೆಗಳಲ್ಲಿ ಯಾವುದೇ ಸಾವು – ನೋವು ಅಥವಾ ಆಸ್ತಿಗೆ ಹಾನಿ ವರದಿಯಾಗಿಲ್ಲ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (ಎನ್​ಸಿಎಸ್​) ಮಾಹಿತಿ ನೀಡಿದೆ.

ಅರುಣಾಚಲ ಪ್ರದೇಶದ ಬಸ್ಸಾರ್​​ ಬಳಿ ಇಂದು ಮುಂಜಾನೆ 4.30ರ ಸಮಯಕ್ಕೆ ಭೂಕಂಪನ ಉಂಟಾಗಿದೆ. ಎನ್​ಸಿಎಸ್​ ಪ್ರಕಾರ ಭೂಕಂಪದ ಕಂಪನವು 10 ಕಿ.ಮೀ. ಆಳವನ್ನು ಹೊಂದಿದ್ದು, ರಿಕ್ಟರ್​ ಮಾಪಕದಲ್ಲಿ 4.9ರಷ್ಟು ತೀವ್ರತೆ ದಾಖಲಾಗಿದೆ. ಬಸ್ಸಾರ್​​​​​​​​ನಿಂದ ಉತ್ತರ-ವಾಯುವ್ಯದ 148 ಕಿ.ಮೀ. ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಟ್ವೀಟ್​ ಮಾಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh




ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಾಹಿತಿ ಚಂದ್ರಶೇಖರ್ ಕಂಬಾರ ಅವರಿಗೆ ಪತ್ನಿ ವಿಯೋಗ

ಮಾನವಹಕ್ಕುಗಳ ಉಲ್ಲಂಘನೆ: 12 ಸಾವಿರಕ್ಕೂ ಹೆಚ್ಚು ಮಂದಿಯ ಅಕ್ರಮ ಬಂಧನ; ವಿಶ್ವಸಂಸ್ಥೆ ಕಳವಳ

ಬೆಳ್ತಂಗಡಿ: ಬೈಕ್‌ ಗೆ ಲಾರಿ ಡಿಕ್ಕಿ; ಇಬ್ಬರ ಸಾವು

ಕೊಳ್ಳೇಗಾಲ ಶಾಸಕ ಎನ್.ಮಹೇಶ್​​ಗೆ ಕೊರೊನಾ ಧೃಡ

ಶಿಕ್ಷಕಿಗೆ ಅವಹೇಳನಾಕಾರಿ ಗಿಫ್ಟ್ ನೀಡಿದ ಮನೆ ಮಾಲಿಕ: ಆರೋಪಿ ವಿರುದ್ಧ ಎಫ್ ಐಆರ್

 

ಇತ್ತೀಚಿನ ಸುದ್ದಿ