ಸಿ.ಟಿ.ರವಿ ಸಿಎಂ ಆಗಲಿ: ಟಿಕೆಟ್ ತಪ್ಪಿಸಿದವರಿಗೆ ಈಶ್ವರಪ್ಪ ಬೀಸಿದ್ರಾ ಚಾಟಿ!
ಚಿಕ್ಕಮಗಳೂರು: ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೂ ಮೊದಲೇ ಬಿಜೆಪಿಯಲ್ಲಿ ಮುಂದಿನ ಸಿಎಂ ವಿಚಾರದಲ್ಲಿ ಸ್ಪರ್ಧೆ ಸೃಷ್ಟಿಯಾಗಿದೆ. ಒಂದೆಡೆ ಬಿಜೆಪಿ ಟಿಕೆಟ್ ವಂಚಿತವಾಗಿರುವ ಕೆ.ಎಸ್.ಈಶ್ವರಪ್ಪ ಪಕ್ಷವನ್ನು ಬೆಂಬಲಿಸಿದ್ದರೂ, ತನಗೆ ಟಿಕೆಟ್ ತಪ್ಪಿಸಿದವರಿಗೆ ಪಾಠ ಕಲಿಸಲು ಮುಂದಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದೆ.
ಮುಂದಿನ ಸಿಎಂ ಸಿ.ಟಿ.ರವಿ ಆಗಲಿ ಎಂಬ ಹೇಳಿಕೆಯನ್ನು ಈಶ್ವರಪ್ಪನವರು ನೀಡಿದ್ದು, ಈ ಹೇಳಿಕೆ ಇದೀಗ ನಾನಾ ಚರ್ಚೆಗಳಿಗೆ ಕಾರಣವಾಗಿದೆ. ಒಂದೆಡೆ ಬಿ.ಎಲ್.ಸಂತೋಷ್ ಹಾಗೂ ಪ್ರಹ್ಲಾದ್ ಜೋಶಿ ಅವರ ತಂಡ ರಾಜ್ಯ ಬಿಜೆಪಿಯ ಹಿರಿಯ ಮುಖಂಡರನ್ನು ಮೂಲೆ ಗುಂಪು ಮಾಡಿದ್ದು, ಪ್ರಹ್ಲಾದ್ ಜೋಶಿ ಮುಂದಿನ ಸಿಎಂ ಆಗಲು ಮುಂದಾಗಿದ್ದಾರೆ ಎನ್ನುವ ಅನುಮಾನಗಳ ನಡುವೆಯೇ ಟಿಕೆಟ್ ವಂಚಿತ ಹಿರಿಯರ ಪಡೆ ಇದೀಗ ಸಂತೋಷ್, ಜೋಶಿ ತಂಡಕ್ಕೆ ಹೊಸ ಸವಾಲು ಹಾಕಲು ಮುಂದಾಗಿದೆ ಅನ್ನೋ ಮಾತುಗಳು ಕೇಳಿ ಬಂದಿವೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ನಿಡಘಟ್ಟದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಬಹಿರಂಗ ಸಭೆಯಲ್ಲಿ ಸಿ.ಟಿ.ರವಿ ಮುಂದಿನ ಮುಖ್ಯಮಂತ್ರಿಯಾಗಲಿ ಎಂದಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಈಶ್ವರಪ್ಪನವರ ಹೇಳಿಕೆ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.
ನಿನ್ನೆ ಮೈಸೂರಿನಲ್ಲಿ ಸಿ.ಟಿ.ರವಿ ಸಿಎಂ ಆಗುವ ಇಂಗಿತವನ್ನು ಹೊರ ಹಾಕಿದ್ರು, ಇಂದು ಈಶ್ವರಪ್ಪ ಬಹಿರಂಗ ಸಭೆಯಲ್ಲೇ ಸಿಎಂ ಆಗಲಿ ಎನ್ನುವ ಹೇಳಿಕೆ ನೀಡಿದ್ದಾರೆ. ಈ ಮೂಲಕ ಹಿರಿಯ ನಾಯಕರು ಬಿಜೆಪಿಯಲ್ಲೇ ಇದ್ದುಕೊಂಡು ತಮ್ಮ ವಿರೋಧಿ ಬಣದ ಷಡ್ಯಂತ್ರದ ವಿರುದ್ಧ ನಿಲ್ಲಲು ಮುಂದಾಗಿದೆ, ಪ್ರಹ್ಲಾದ್ ಜೋಶಿ ಅವರನ್ನು ಸಿಎಂ ಮಾಡಬೇಕು ಎಂದು ಪಣತೊಟ್ಟಿರುವವರಿಗೆ ತಿರುಗೇಟು ನೀಡಲು ಹಿರಿಯ ಬಿಜೆಪಿಗರು ಮುಂದಾಗಿದ್ದಾರೆಯೇ ಎನ್ನುವ ಕುತೂಹಲ ಸೃಷ್ಟಿಗೆ ಕಾರಣವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw