ಈಶ್ವರಪ್ಪನವರ ಬೆವರಿಳಿಸಿದ ಫೋನ್ ಕರೆ: ಗಾಬರಿಯಿಂದ ಬೆಂಗಳೂರಿಗೆ ತೆರಳಿದ ಈಶ್ವರಪ್ಪ - Mahanayaka
10:04 PM Thursday 12 - December 2024

ಈಶ್ವರಪ್ಪನವರ ಬೆವರಿಳಿಸಿದ ಫೋನ್ ಕರೆ: ಗಾಬರಿಯಿಂದ ಬೆಂಗಳೂರಿಗೆ ತೆರಳಿದ ಈಶ್ವರಪ್ಪ

eshwarappa
13/04/2022

ಬೆಂಗಳೂರು: ಈಶ್ವರಪ್ಪ ವಿರುದ್ಧ  40% ಕಮಿಷನ್ ಆರೋಪ ಮಾಡಿದ್ದ ಹಿಂದೂ ಗುತ್ತಿಗೆದಾರ ಸಂತೋಷ್ ಪಾಟೀಲ್  ಆತ್ಮಹತ್ಯೆ ಮಾಡಿಕೊಂಡ ‍ಪ್ರಕರಣ ಇದೀಗ ಈಶ್ವರಪ್ಪನವರ ಕೊರಳು ಸುತ್ತಿಕೊಂಡಿದ್ದು, ಈ ನಡುವೆ  ಈಶ್ವರಪ್ಪನವರಿಗೆ ಬಂದ ಫೋನ್ ಕರೆಯೊಂದು ಈಶ್ವರಪ್ಪನವರ ಬೆವರಿಳಿಸಿದೆ.

ಮೈಸೂರಿನಲ್ಲಿ ಬುಧವಾರ ಎರಡನೇ ಬಿಜೆಪಿ ಸಂಘಟನಾತ್ಮಕ ಯಾತ್ರೆಯಲ್ಲಿ ಬ್ಯುಸಿ ಇದ್ದ ಈಶ್ವರಪ್ಪನವರಿಗೆ ಯಾವುದೋ ಫೋನ್ ಕರೆಯೊಂದು ಬಂದಿದ್ದು, ಅವರು 15 ನಿಮಿಷಗಳ ಕಾಲ ಫೋನ್ ನಲ್ಲಿ ಮಾತನಾಡಿದ್ದು, ತೀವ್ರ ಆತಂಕದಲ್ಲಿದ್ದರು. ಬಳಿಕ ತಕ್ಷಣವೇ ಬೆಂಗಳೂರಿಗೆ ಅವರು ಹೊರಡಿದ್ದಾರೆ ಎನ್ನಲಾಗಿದೆ.

ಈಶ್ವರಪ್ಪನವರ ರಾಜೀನಾಮೆಗೆ ಒತ್ತಡ ತೀವ್ರವಾಗುತ್ತಿದ್ದು, ರಾಜೀನಾಮೆ ನೀಡುವುದು ಅನಿವಾರ್ಯವಾಗಿದೆ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಕೆ.ಎಸ್.ಈಶ್ವರಪ್ಪ ನಿನ್ನೆ ಹೇಳಿಕೆ ನೀಡಿದ್ದರು. ಸಂತೋಷ್ ಯಾರು ಎನ್ನುವುದೇ ನನಗೆ ಗೊತ್ತಿಲ್ಲ. ನಮ್ಮ ಇಲಾಖೆ ಮೇಲೆ ಆರೋಪ ಮಾಡಿದ್ದರು. ಹೀಗಾಗಿ ಅವರ ಮೇಲೆ ಪ್ರಕರಣ ದಾಖಲಿಸಿದ್ದೆವು. ಕೋರ್ಟ್ ನೋಟಿಸ್ ನೋಡಿ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಸೀದಿ ಬಳಿಯಲ್ಲಿ ಯುವಕನಿಗೆ ಚೂರಿಯಿಂದ ಇರಿದು ಹತ್ಯೆಗೆ ಯತ್ನ

ಹಿಂದೂ ಗುತ್ತಿಗೆದಾರನ ಆತ್ಮಹತ್ಯೆ: ರಾಜೀನಾಮೆ ನೀಡುತ್ತಾರಾ?

ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ!

ಒಟ್ಟಿಗೆ ಕಾಡಿಗೆ ತೆರಳಿದ್ದ 3 ಯುವತಿಯರ ಮೃತದೇಹ ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಪತ್ನಿ ಹೆರಿಗೆ ಕೊಠಡಿಯಲ್ಲಿ, ಪತಿ ಬಾರ್ ನಲ್ಲಿ, ಮಗ ರಸ್ತೆಯಲ್ಲಿ | ಮನಕಲಕುವ ಘಟನೆ

ಇತ್ತೀಚಿನ ಸುದ್ದಿ