ಈಶ್ವರಪ್ಪ ಪೆದ್ದ, ಅವರ ನಾಲಿಗೆಗೂ ಮೆದುಳಿಗೂ ಲಿಂಕ್ ಇಲ್ಲ | ಸಿದ್ದರಾಮಯ್ಯ ವ್ಯಂಗ್ಯ
ಶಿವಮೊಗ್ಗ: ಈಶ್ವರಪ್ಪ ಒಬ್ಬ ಪೆದ್ದ, ಅವರ ನಾಲಿಗೆಗೂ ಮೆದುಳಿಗೂ ಲಿಂಕ್ ಇಲ್ಲ, ನನ್ನ ವಿರುದ್ಧ ಟೀಕೆ ಮಾಡಿದರೆ, ದೊಡ್ಡ ಲೀಡರ್ ಆಗಬಹುದು ಎಂದು ಯಾರೋ ಕೇಳಿಕೊಟ್ಟಿದ್ದಾರೆ ಅದಕ್ಕೆ ನನ್ನನ್ನು ಟೀಕೆ ಮಾಡ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹಿ ಇಸ್ ಎ ರೆಸ್ಪಾನ್ಸಿಬಲ್ ಮಿನಿಸ್ಟರ್, ರೆಸ್ಪಾನ್ಸಿಬಲ್ ಆಗಿ ಮಾತನಾಡಬೇಕು. ಅವರು ವಿರೋಧ ಪಕ್ಷದರಲ್ಲ, ಅವರೊಬ್ಬರು ಮಿನಿಸ್ಟರ್, ಅವರ ಇಲಾಖೆಯಲ್ಲಿ ಕೂಡ 40 ಪರ್ಸೆಂಟ್ ಕಮಿಷನ್ ಹೊಡಿಯುತ್ತಿದ್ದಾರೆ ಎಂದು ಈಶ್ವರಪ್ಪನವರಿಗೆ ತಿರುಗೇಟು ನೀಡಿದರು.
ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಿಎಂ ಬದಲಾಗುತ್ತಾರೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ ಬಾಯಿ ತಪ್ಪಿ ಸತ್ಯವನ್ನು ಹೇಳಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪಗೆ ಸಿಎಂ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶಿವಮೊಗ್ಗದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಯುವತಿಯ ಎದುರು ಓಲಾ ಕ್ಯಾಬ್ ಚಾಲಕನಿಂದ ಅಶ್ಲೀಲ ವರ್ತನೆ!
ರಸ್ತೆಗೆ ತೆಂಗಿನ ಕಾಯಿ ಒಡೆದು ಉದ್ಘಾಟನೆ: ತೆಂಗಿನ ಕಾಯಿ ಬದಲು ಬಿರುಕು ಬಿಟ್ಟ ರಸ್ತೆ | ಬಿಜೆಪಿ ಶಾಸಕಿಗೆ ಮುಜುಗರ
ಮಂಗಳೂರು: ಶಾಲಾ ವಾಹನ ಚಾಲಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ!
ಈರುಳ್ಳಿ ಸಾಗಾಟದ ಲಾರಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ ನಾಲ್ವರು ಸ್ಥಳದಲ್ಲೇ ಸಾವು
ಪಬ್ ನಲ್ಲಿ ಕಿರಿಕ್: ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿಗೆ ಬಿಯರ್ ಬಾಟಲಿಯಿಂದ ಹಲ್ಲೆ