ಈಶ್ವರಪ್ಪ, ಬಿ.ವೈ. ರಾಘವೇಂದ್ರ ಟಿಕೆಟ್ ತ್ಯಜಿಸಿ ಹರ್ಷನ ತಂಗಿ, ತಾಯಿಗೆ ನೀಡಲಿ: ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹೀಂ
ಶಿವಮೊಗ್ಗ: ಸಚಿವರಾಗಿರುವ ಸ್ಥಳೀಯ ಶಾಸಕ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಟಿಕೆಟ್ ತ್ಯಜಿಸಿ, ಮೃತಪಟ್ಟ ಹರ್ಷನ ತಂಗಿಗೆ ಎಂಎಲ್ಎ ಟಿಕೆಟ್ ನೀಡಲಿ ಎಂದು ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹೀಂ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಬಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆ ವಿಚಾರವಾಗಿ ಮಡಿಕೇರಿ ಸಮೀಪದ ಸುಂಟಿಕೊಪ್ಪದಲ್ಲಿ ಅವರು ಈ ಹೇಳಿಕೆ ನೀಡಿದರು. ಹರ್ಷನ ತಂಗಿಗೆ ಟಿಕೆಟ್ ನೀಡಿದರೆ ನಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಅವಿರೋಧವಾಗಿ ಆಕೆಯನ್ನು ವಿಧಾನ ಸಭೆಗೆ ಕಳುಹಿಸುತ್ತೇವೆ.
ಹಾಗೆಯೇ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಗ ಬಿ.ವೈ. ರಾಘವೇಂದ್ರ ಸಹ ಎಂಪಿ ಸ್ಥಾನ ತ್ಯಜಿಸಲಿ. ಹರ್ಷ ಅವರ ತಾಯಿಗೆ ಎಂಪಿ ಸ್ಥಾನಕ್ಕೆ ಟಿಕೆಟ್ ಕೊಡಲಿ. ಇದರಿಂದ ಹಿಂದೂ ಸಂಸ್ಕೃತಿಗೆ ನಿಜವಾದ ಗೌರವ ಸಿಕ್ಕಂತಾಗುತ್ತದೆ ಎಂದು ಸಿ ಎಂ ಇಬ್ರಾಹೀಂ ತಮ್ಮ ಆಶಯ ವ್ಯಕ್ತಪಡಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬದುಕಿರುವ ವಾಪಸ್ ಕರೆ ತರದೆ ಹೆಣಗಳನ್ನು ತರುತ್ತಿದ್ದಾರೆ: ಡಿ.ಕೆ.ಶಿವಕುಮಾರ್
ನಮ್ಮ ಮಗನ ಸಾವಿಗೆ ಈ ಸರ್ಕಾರವೇ ಕಾರಣ: ಮೃತ ನವೀನ್ ತಂದೆ ಶೇಖರಗೌಡ
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆ ಕಾಪಾಡಿದ ಬೌದ್ಧ ಧರ್ಮದ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ: ಸಿಎಂಗೆ ಮನವಿ
ದೊಣ್ಣೆಯಿಂದ ಹೊಡೆದು ವ್ಯಕ್ತಿಯ ಭೀಕರ ಹತ್ಯೆ