“ಜೈನಕಾಶಿ ಮೂಡುಬಿದಿರೆಯ ಇಟ್ಟೆಕೊಪ್ಪ ಪೆರಿಯ ಮಂಜವೇ ಕಾನದ ಕಟದರ ಆದಿಮೂಲ”
ಮೂಡಬಿದ್ರಿ: ತುಳುನಾಡಿನ ಅವಳಿ ವೀರರಾದ ಕಾನದ ಕಟದರು ಸುಮಾರು 450 ವರುಷಗಳ ಹಿಂದೆ ಹುಟ್ಟಿ ಪಂಚ ಶೀಲ ತತ್ವಗಳನ್ನು ಮೈಗೂಡಿಸಿಕೊಂಡು, ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆ, ಅಸಮಾನತೆ, ದಬ್ಬಾಳಿಕೆ, ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಹೋರಾಡಿ, ಸ್ವಾಭಿಮಾನದ, ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾಗಿ ಅಜರಾಮರರಾಗಿದ್ದಾರೆ. ಪ್ರಸ್ತುತ ಕಾನದ ಕಟದರ ಹೆಸರಿನಲ್ಲಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪೂಜ್ಯನೀಯ ಕಲ್ಲು-ಕಲಗಳು, ಆರಾಧನಾ ಕ್ಷೇತ್ರಗಳು, ಸೇವಾ ಕೇಂದ್ರಗಳು, ಸಂಘಟಿತ ವೇದಿಕೆಗಳು ಕಾರ್ಯಪ್ರವೃರ್ತವಾಗಿವೆ.
ಇವೆಲ್ಲವೂ ಸಾರಮಾನ್ಯ ಕಾನದ ಕಟದರಿಗೆ ಗೌರವ ಕೊಡುವ ಸಂಕೇತವಾದರೂ ಸಹ ಅವರನ್ನು ಹೊತ್ತು, ಹೆತ್ತು, ಸಾಕಿ ಸಲಹಿದ ಆದರ್ಶ ವೀರ ಪುರುಷರನ್ನಾಗಿ ನಿರ್ಮಾಣ ಮಾಡಿದ “ಪತ್ತಪ್ಪೆ ಬಾಲೆಲು ಪದಿನಾಜಿ ಬರಿತಕುಲೆಗ್” ಒರಿತ್ಯಪ್ಪೆ ಸತ್ಯದಪ್ಪೆ ಬೊಲ್ಲೆಯು ಜನ್ಮತಾಳಿದ ಪುಣ್ಯನೆಲೆಯೆ ನಮಗೆಲ್ಲರಿಗೂ ಕಾನದ ಕಟದರ ಮೂಲವೇ ಸರಿ. ಈ ನಿಟ್ಟಿನಲ್ಲಿ ಇಟ್ಟೆಕೊಪ್ಪ ಪೆರಿಯ ಮಂಜದ ಅಭಿವೃದ್ಧಿ ಕಾರ್ಯಕ್ರಮಗಳು ಅತ್ಯಂತ ಜರೂರಾಗಿ ನಡೆಯಲಿದೆ.
ನೂರಾರು ವರ್ಷಗಳಿಂದ ಸರ್ವ ಸಮಾಜದ ಭಕ್ತ ಮಹಾಶಯರು ಈ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಮನದಾಳದ ಇಂಗಿತವನ್ನು ಅರಿಕೆ ಮಾಡಿಕೊಂಡು ಬದುಕಿನಲ್ಲಿ ಆಯೂರಾರೋಗ್ಯ ಸುಖ ಸಂಪತ್ತು ಸಕಲೈಶ್ವರ್ಯ ಒದಗಿ, ಮಾನಸಿಕ ನೆಮ್ಮದಿಯನ್ನು ಪಡೆದ ಇತಿಹಾಸ ಇದೆ.
ಕಾರಣಾಂತರದಿಂದ ಕಾರ್ಯ ಚಟುವಟಿಕೆಗಳು ಕೆಲವು ಕಾಲಗಳ ತನಕ ಸ್ಥಗಿತಗೊಂಡಿತ್ತು, ಇದೀಗ ಅಮವಾಸ್ಯೆಯ ಈ ದಿವಸ ಮತ್ತೆ ಗ್ರಾಮಸ್ಥರು ಹಿರಿಯರ ಮಾರ್ಗದರ್ಶನದಲ್ಲಿ ನೂತನ ಆಡಳಿತ ಸಮಿತಿಯ ರಚನೆಯನ್ನು ಮಾಡಲಾಗಿ ಮತ್ತೆ ಚಟುವಟಿಕೆಗಳು ಸಕ್ರಿಯ ಗೊಂಡಿತು.
ಕಾನದ -ಕಟದ ಆದಿಮೂಲ (ರಿ) ಇಟ್ಟೆ ಕೊಪ್ಪ ಪೆರಿಯ ಮಂಜ, ಪ್ರಾಂತ್ಯ ಗ್ರಾಮ ಕೋಟೆಬಾಗಿಲು, ಮೂಡಬಿದ್ರಿ. 574227. ದ. ಕ.
ಪದಾಧಿಕಾರಿಗಳ ಆಯ್ಕೆ:
ಗೌರವ ಅಧ್ಯಕ್ಷರು : ದಾಸಪ್ಪ ಎಡಪದವು.
ಅಧ್ಯಕ್ಷರು : ಬಾಬು ಮಾಸ್ತರ್ ಕೋಟೆಬಾಗಿಲು
ಉಪಾಧ್ಯಕ್ಷರು: ಉಮೇಶ್ ನಾರಂಪಾಡಿ.
ಪ್ರಧಾನ ಕಾರ್ಯದರ್ಶಿ: ಎಂ. ರಮೇಶ್ ಬೋಧಿ. ಕೋಟೆಬಾಗಿಲು
ಕಾರ್ಯದರ್ಶಿ: ರಾಜೇಶ್ ನಾರಂಪಾಡಿ.
ಕೋಶಾಧಿಕಾರಿ: ಕೃಷ್ಣ ಕುಮಾರ್. ಚಾಮುಂಡಿಬೆಟ್ಟ.
ಗೌರವ ಸಲಹೆಗಾರರು:
ಪಿ ಡೀಕಯ್ಯ ನಾಗಮಲೆ
ಅಚ್ಯುತ ಸಂಪಾಯಿ
ಶಾಂತರಾಮ್ ಮೂಡುಬಿದಿರೆ
ವೆಂಕಣ್ಣ ಕೊಯ್ಯೂರು
ಹರಿಯಪ್ಪ ಮುತ್ತೂರು
ಸತೀಶ್ ಕಕ್ಕೆಪದವು
ಸಮಿತಿ ಸದಸ್ಯರು : ಸನ್ಮಾನ್ಯರುಗಳಾದ ಸೇಸಪ್ಪ ಚಾಮುಂಡಿ ಬೆಟ್ಟ, ಪದ್ಮನಾಭ ಪ್ರಾಂತ್ಯ ಗ್ರಾಮ, ಅಣ್ಣಿ ಎಂ., ಶ್ರೀಧರ, ವಿಶ್ವನಾಥ, ಸುರೇಶ್, ಶೇಖರ, ಸುನಿಲ್, ಅಣ್ಣು ನಾರಂಪಾಡಿ, ಅಣ್ಣು ಮಂಜದ ಮನೆ, ಸಂಜೀವ ಮಂಜದ ಮನೆ, ಸಂಜೀವ ವಿಶಾಲ್ ನಗರ, ಸಿದ್ದು ನಾರಂಪಾಡಿ, ಕುಮಾರ್ ನಾರಂಪಾಡಿ, ಕುಸುಮ ಸುಭಾಶ್ ನಗರ್ , ಜಗನ್ನಾಥ ನಾರಂಪಾಡಿ, ಲೋಹಿತ್ ನಾರಂಪಾಡಿ, ಶೀನ ನಾರಂಪಾಡಿ, ಬಾಬು ಜ್ಯೋತಿನಗರ, ಸುಧಾಕರ್ ಮಂಜದ ಮನೆ, ಶಕುಂತಲಾ ಎಡಪದವು, ಬೈದು ನಾರಂಪಾಡಿ, ವಾರಿಜ ಮಂಜದ ಮನೆ. ಸುಂದರ ಎಂ. ಮೂಡುಕೊಣಾಜೆ ಹೀಗೆ ಮುಂದಕ್ಕೆ ಪ್ರಾಂತ್ಯ ಗ್ರಾಮದ ಹಲವಾರು ಸದಸ್ಯರ ಸೇರ್ಪಡೆ ಆಗಲಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ವೇದಿಕೆಯಲ್ಲಿಯೇ ಅಶ್ವಥ್ ನಾರಾಯಣ, ಡಿ.ಕೆ.ಸುರೇಶ್ ನಡುವೆ ಜಟಾಪಟಿ
ಲಾಕ್ ಡೌನ್ ಜಾರಿಯಾದರೂ ಮೇಕೆದಾಟು ಪಾದಯಾತ್ರೆ ತಡೆಯಲು ಸಾಧ್ಯವಿಲ್ಲ | ಡಿ.ಕೆ.ಶಿವಕುಮಾರ್
ಹಡಗಿನಲ್ಲೇ 2,000 ಪ್ರಯಾಣಿಕರಿಗೆ ಕ್ವಾರಂಟೈನ್!