ಇವನೆಂತಹಾ ಕ್ರೂರಿ… !? | ಮಗುವಿಗೆ ಹಾಲು ನೀಡುತ್ತಿದ್ದ ಪತ್ನಿಯ ಎದೆಗೆ ಇರಿದ ಪತಿ! - Mahanayaka
4:16 PM Thursday 12 - December 2024

ಇವನೆಂತಹಾ ಕ್ರೂರಿ… !? | ಮಗುವಿಗೆ ಹಾಲು ನೀಡುತ್ತಿದ್ದ ಪತ್ನಿಯ ಎದೆಗೆ ಇರಿದ ಪತಿ!

26/02/2021

ಹುಬ್ಬಳ್ಳಿ:  ಇವನೆಂತಹಾ ಕ್ರೂರಿ ಇರಬಹುದು? ಪತ್ನಿ ತನ್ನ ಮಗುವಿಗೆ ಹಾಲುಣಿಸುತ್ತಿರುವ ಸಂದರ್ಭದಲ್ಲಿಯೇ ಆಕೆಯ ಎದೆಗೆ ಬ್ಲೇಡ್ ನಿಂದ ಇರಿದ ಅಮಾನವೀಯ ಘಟನೆ  ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದಿದೆ.

ಹುಬ್ಬಳ್ಳಿ ಸೆಟ್ಲಮೆಂಟ್ ನಗರದಲ್ಲಿ ಈ ಘಟನೆ ನಡೆದಿದ್ದು,  ಸುನೀಲ್ ಎಂಬಾತ ಪತ್ನಿ ರಂಜಿತಾಳ ಮೇಲೆ ಈ ದಾಳಿ ನಡೆಸಿದ್ದಾನೆ. ಪತಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಪತ್ನಿಯನ್ನು ಕೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೌಟುಂಬಿಕ ಮನಸ್ತಾಪದಿಂದ ಸುನೀಲ್ ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿದು ಬಂದಿದ್ದು,  ತನ್ನ ಮಗುವಿಗೆ ಹಾಲು ನೀಡುತ್ತಾ ಪತ್ನಿ ಕುಳಿತುಕೊಂಡಿದ್ದಳು. ಈ ವೇಳೆ ಏಕಾಏಕಿ ಆರೋಪಿಯು ಆಕೆಯ ಎದೆಗೆ ಬ್ಲೇಡ್ ನಿಂದ ತೀವ್ರವಾದ ಗಾಯಗೊಳಿಸಿದ್ದಾನೆ.

ಘಟನೆ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

ಇತ್ತೀಚಿನ ಸುದ್ದಿ