ಇವರ ಸಿಡಿ ಅವರ ಬಳಿಯಲ್ಲಿದೆ ಅವರ ಸಿಡಿ ಇವರ ಬಳಿಯಲ್ಲಿದೆ | ಯತ್ನಾಳ್ ಹೊಸ ಆರೋಪ - Mahanayaka
4:02 PM Thursday 12 - December 2024

ಇವರ ಸಿಡಿ ಅವರ ಬಳಿಯಲ್ಲಿದೆ ಅವರ ಸಿಡಿ ಇವರ ಬಳಿಯಲ್ಲಿದೆ | ಯತ್ನಾಳ್ ಹೊಸ ಆರೋಪ

karnataka cd
31/03/2021

ವಿಜಯಪುರ: ಕರ್ನಾಟಕದಲ್ಲಿ ಸಿಡಿ ಪ್ರಕರಣ ಮತ್ತೆ ಗಬ್ಬೆದ್ದಿದ್ದು, ಇದೀಗ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದು, ಯಡಿಯೂರಪ್ಪ  ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

 ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪ ಕೇಳಿ ಬಂದಿದೆ. ಯುವತಿಯ ಪೋಷಕರೇ ಡಿಕೆಶಿ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಸಿಎಂ ಬಿ.ಎಸ್.ಯಡಿಯೂರಪ್ಪ ಮೃದುಧೋರಣೆ ತಳೆದಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.

ಸಿಡಿ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಶಿವ ಕುಮಾರ್ ನಡುವೆ ಒಳ ಒಪ್ಪಂದವಾಗಿದ್ದು,  ಇದಕ್ಕಾಗಿಯೇ ಡಿಕೆಶಿ ಸಾಫ್ಟ್ ಆಗಿದ್ದಾರೆ. ಅವರ ಸಿಡಿ ಇವರ ಬಳಿ ಇದೆ ಇವರ ಸಿಡಿ ಅವರ ಬಳಿ ಇದೆ. ಹಾಗಾಗಿ ಕ್ರಮಕೈಗೊಳ್ಳುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ನಟಿ ಸನ್ನಿಲಿಯೋನ್ ಹೋಳಿ ಆಚರಣೆ ಹೇಗಿತ್ತು ಗೊತ್ತಾ?

ಇತ್ತೀಚಿನ ಸುದ್ದಿ