ಬಿಜೆಪಿಗೆ ಬೆಂಬಲ ನೀಡಲು ಸಿದ್ಧ ಎಂದ ಮಾಯಾವತಿ | ಅಷ್ಟಕ್ಕೂ ಮಾಯಾವತಿ ಹೀಗೆ ಹೇಳಿದ್ಯಾಕೆ? - Mahanayaka

ಬಿಜೆಪಿಗೆ ಬೆಂಬಲ ನೀಡಲು ಸಿದ್ಧ ಎಂದ ಮಾಯಾವತಿ | ಅಷ್ಟಕ್ಕೂ ಮಾಯಾವತಿ ಹೀಗೆ ಹೇಳಿದ್ಯಾಕೆ?

29/10/2020

ಲಕ್ನೋ: ಉತ್ತರ ಪ್ರದೇಶ ಪರಿಷತ್ ಚುನಾವಣೆಯಲ್ಲಿ  ಎಸ್ ಪಿ ಅಭ್ಯರ್ಥಿಗಳನ್ನು ಸೋಲಿಸಲು ನಾವು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಲೂ ಸಿದ್ಧ ಎಂದು ಬಹುಜನ ಸಮಾಜ ಪಾರ್ಟಿಯ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.


ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಎಸ್ ಪಿ-ಎಸ್ ಪಿ ಮೈತ್ರಿ ವಿಫಲವಾದ ಬಳಿಕ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರು ತೀವ್ರ ಪ್ರತಿಸ್ಪರ್ಧಿಗಳಾಗಿ ಬದಲಾಗಿದ್ದು, “ಎಸ್ ಪಿಯನ್ನು ಸೋಲಿಸಲು ನಾವು ಯಾವುದೇ ಪಕ್ಷಕ್ಕೆ ಮತನೀಡಲು ಸಿದ್ಧ, ಬಿಜೆಪಿಗೆ ಕೂಡ…” ಎಂದು ಮಾಯಾವತಿ ತಿಳಿಸಿದ್ದಾರೆ.


ಎಎನ್ ಐ ಸುದ್ದಿಯ ಜೊತೆಗೆ ಮಾತನಾಡಿರುವ ಮಾಯಾವತಿ, ಯುಪಿಯಲ್ಲಿ ಮುಂದಿನ ಚುನಾವಣೆಯಲ್ಲಿ  ಎಂ ಎಲ್ ಸಿ ಚುನಾವಣೆಯಲ್ಲಿ ಎಸ್ ಪಿ ಅಭ್ಯರ್ಥಿಗಳನ್ನು ಸೋಲಿಸಲು ನಾವು ನಿರ್ಧರಿಸಿದ್ದೇವೆ.  ಅದಕ್ಕಾಗಿ ನಮ್ಮ ಎಲ್ಲ ಶಕ್ತಿಗಳನ್ನೂ ವಿನಿಯೋಗಿಸುತ್ತೇವೆ.  ನಮ್ಮ ಮತವನ್ನು ಬಿಜೆಪಿ ಅಥವಾ ಯಾವುದೇ ಪಕ್ಷದ ಅಭ್ಯರ್ಥಿಗೆ ನೀಡಲೂ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.


ಇತ್ತೀಚಿನ ಸುದ್ದಿ