ಅಸಾದುದ್ದೀನ್ ಓವೈಸಿಗೆ ಮತ ಚಲಾಯಿಸಿದರೆ ಮುಸ್ಲಿಮರು ಬಲಗೊಳ್ಳುತ್ತಾರೆ | ಹೈದರಾಬಾದ್ ನಲ್ಲಿ ಓವೈಸಿ ವಿರುದ್ಧ ಕಿಡಿಕಾರುತ್ತಾ ತೇಜಸ್ವಿ ಸೂರ್ಯ ಆತಂಕ - Mahanayaka
7:10 PM Wednesday 22 - January 2025

ಅಸಾದುದ್ದೀನ್ ಓವೈಸಿಗೆ ಮತ ಚಲಾಯಿಸಿದರೆ ಮುಸ್ಲಿಮರು ಬಲಗೊಳ್ಳುತ್ತಾರೆ | ಹೈದರಾಬಾದ್ ನಲ್ಲಿ ಓವೈಸಿ ವಿರುದ್ಧ ಕಿಡಿಕಾರುತ್ತಾ ತೇಜಸ್ವಿ ಸೂರ್ಯ ಆತಂಕ

23/11/2020

ಹೈದರಾಬಾದ್:  ಅಸಾದುದ್ದೀನ್ ಒವೈಸಿ ವಪರ ಚಲಾಯಿಸುವ ಒಂದೊಂದು ಮತ ಕೂಡ ಭಾರತದ ವಿರುದ್ಧ ಚಲಾಯಿಸುವ ಮತಗಳಾಗಿವೆ ಎಂದು ಬಿಜೆಪಿ ಮುಖಂಡ ತೇಜಸ್ವಿ ಸೂರ್ಯ ಹೇಳಿದ್ದು, ಹೈದರಾಬಾದ್ ಚುನಾವಣಾ ಪ್ರಚಾರದ ವೇಳೆ ತೇಜಸ್ವಿ ಸೂರ್ಯ ಅಸಾದುದ್ದೀನ್ ಒವೈಸಿ ವಿರುದ್ಧ ವಾಗ್ದಾಳಿ ನಡೆಸಿದರು.

ಹೈದರಾಬಾದ್ ನಲ್ಲಿ ಒವೈಸಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ,  ರೊಹಿಂಗ್ಯ ಮುಸ್ಲಿಮರ ಪರವಾಗಿ ಮಾತನಾಡಿರುವುದು ಬಿಟ್ಟರೆ, ಓವೈಸಿ ಏನೂ ಮಾಡಿಲ್ಲ, ಅಸಾದುದ್ದೀನ್ ಓವೈಸಿ ಹಾಗೂ ಅವರ ಸಹೋದರ ಅಕ್ಬರುದ್ದೀನ್ ಓವೈಸಿ ವಿಭಜಕ ಶಕ್ತಿಗಳು ಹಾಗೂ ಕೋಮುವಾದಿ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ತೇಜಸ್ವಿ ಸೂರ್ಯ ಕಿಡಿಕಾರಿದರು.

ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಮೊಹಮ್ಮದ್ ಅಲಿ ಜಿನ್ನಾ ಅವತಾರವಾಗಿದ್ದು,  ಅವರಿಗೆ ಚಲಾಯಿಸುವ ಪ್ರತಿಯೊಂದು ಮತವೂ ಭಾರತದ ವಿರುದ್ಧ ಚಲಾಯಿಸುವ ಮತವಾಗಿದೆ. ನೀವು ಇಲ್ಲಿ ಒವೈಸಿಗೆ ಮತ ಚಲಾಯಿಸಿದರೆ ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಮುಸ್ಲಿಮ್ ಪ್ರದೇಶಗಳಲ್ಲಿ ಓವೈಸಿ ಬಲಶಾಲಿಯಾಗುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಓವೈಸಿ ಕೂಡ ಜಿನ್ನಾ ಮಾತನಾಡುವ ಕ್ರೂರ ಇಸ್ಲಾಮ್ ಧರ್ಮದ ಪ್ರತ್ಯೇಕವಾದ ಮತ್ತು ಉಗ್ರವಾದದ ಭಾಷೆಯನ್ನು ಮಾತನಾಡುತ್ತಾರೆ. ಭಾರತೀಯರು ಓವೈಸಿಯ ವಿಭಜಕ ಹಾಗೂ ಕೋಮುವಾದಿ ರಾಜಕಾರಣದ ವಿರುದ್ಧ ನಿಲ್ಲಬೇಕು. ಭಾರತ ಇಸ್ಲಾಮೀಕರಣವನ್ನು ನಡೆಯಲು ನಾವು ಬಿಡುವುದಿಲ್ಲ ಎಂದು ಅವರು ಹೇಳಿದರು.

ಇದು ನಿಜಾಮರ ಸಮಯವಲ್ಲ, ಹಿಂದೂ ಹೃದಯ ಸಾಮ್ರಾಟ್ ನರೇಂದ್ರ ಮೋದಿಯವರ ಸಮಯ ಇಲ್ಲಿ ನಿಮ್ಮಿಂದ ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ನಾನು ಓವೈಸಿಗೆ ಹೇಳಲು ಬಯಸುತ್ತೇನೆ ಎಂದು ತೇಜಸ್ವಿ ಸೂರ್ಯ ಕಿಡಿಕಾರಿದರು.

ಇತ್ತೀಚಿನ ಸುದ್ದಿ