ಬಾಲಕಿಗೆ ಮದ್ಯ ಕುಡಿಸಿ ಫುಟ್ಬಾಲ್ ಆಟಗಾರನಿಂದ ಅತ್ಯಾಚಾರ - Mahanayaka
10:09 AM Wednesday 5 - February 2025

ಬಾಲಕಿಗೆ ಮದ್ಯ ಕುಡಿಸಿ ಫುಟ್ಬಾಲ್ ಆಟಗಾರನಿಂದ ಅತ್ಯಾಚಾರ

28/01/2021

ಲಂಡನ್:  ಮಾಜಿ  ಫುಟ್ಬಾಲ್ ಆಟಗಾರನೊಬ್ಬ 14 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮದ್ಯ ಕುಡಿಸಿ ಅತ್ಯಾಚಾರ ಮಾಡಿರುವ ಘಟನೆ ಲಂಡನ್ ನಲ್ಲಿ ನಡೆದಿದ್ದು,  ಈತನಿಗೆ ಬ್ರಿಟನ್ ನ್ಯಾಯಾಲಯ ಮೂರೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ.

23 ವರ್ಷದ ಟೈರೆಲ್ ರಾಬಿನ್ಸನ್ ಈ ದುಷ್ಕೃತ್ಯ ಎಸಗಿದವನಾಗಿದ್ದಾನೆ.  ಘಟನೆ 2018ರ ಆಗಸ್ಟ್ 13ರಂದು ನಡೆದಿತ್ತು.  14 ವರ್ಷದ ಬಾಲಕಿಗೆ ಮದ್ಯ ಕುಡಿಸಿ, ಅತ್ಯಾಚಾರ ನಡೆಸಿದ್ದ.  ಬಳಿಕ ಬಾಲಕಿಯ ನಗ್ನ ಫೋಟೋವನ್ನು ಸ್ನಾಪ್ ಚಾಟ್ ಆಪ್ ಮೂಲಕ ತನ್ನ ಸ್ನೇಹಿತರಿಗೆ ಶೇರ್ ಮಾಡಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟೈರೆಲ್ ನನ್ನು ಪೊಲೀಸರು ಬಂಧಿಸಿದ್ದರು. ಈ ವಿಚಾರವಾಗಿ ಟೈರೆಲ್  ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಪತ್ರ ನೀಡಿದ್ದನು. ಅಲ್ಲದೇ ತಾನು ಬಾಲಕಿಯ ನಗ್ನ ಚಿತ್ರ ಶೇರ್ ಮಾಡಿರುವುದನ್ನೂ ಆತ ಒಪ್ಪಿಕೊಂಡಿದ್ದ.  ಈತನನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಮೂರೂವರೆ ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಇತ್ತೀಚಿನ ಸುದ್ದಿ