ಲೈಂಗಿಕ ಕಿರುಕುಳ ಪ್ರಕರಣ: ಮಾಜಿ ಶಾಸಕ ಪಿ.ಸಿ.ಜಾರ್ಜ್ ಬಂಧನ
![p c george](https://www.mahanayaka.in/wp-content/uploads/2022/07/p-c-george.jpg)
ತಿರುವನಂತಪುರಂ: ಲೈಂಗಿಕ ಕಿರುಕುಳ ನೀಡಿದ ದೂರಿನ ಮೇರೆಗೆ ಮಾಜಿ ಶಾಸಕ ಪಿ.ಸಿ. ಜಾರ್ಜ್ ನ್ನು ಸೋಲಾರ್ ವಂಚನೆ ಪ್ರಕರಣದ ಆರೋಪಿ ಗೌಪ್ಯ ಹೇಳಿಕೆಯ ಹಿನ್ನೆಲೆಯಲ್ಲಿ ಮ್ಯೂಸಿಯಂ ಪೊಲೀಸರು ಬಂಧಿಸಿದ್ದಾರೆ.
ತಿರುವನಂತಪುರಂನಲ್ಲಿರುವ ಅತಿಥಿ ಗೃಹದಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಮತ್ತು ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾಳೆ. ಇದೇ ವೇಳೆ ಪ್ರಕರಣದಲ್ಲಿ ಯಾವುದೇ ಕರುಹು ಇಲ್ಲ ಇದೊಂದು ಸುಳ್ಳು ಪ್ರಕರಣವಾಗಿದ್ದು, ನಿರಪರಾಧಿ ಎಂದು ಸಾಬೀತು ಪಡಿಸುತ್ತೇನೆ ಎಂದು ಎಂದು ಪಿ.ಸಿ.ಜಾರ್ಜ್ ಪ್ರತಿಕ್ರಿಯಿಸಿದರು.
ಕಂಟೋನ್ಮೆಂಟ್ ಸಹಾಯಕ ಆಯುಕ್ತರ ನಿರ್ದೇಶನದ ಮೇರೆಗೆ ಬಂಧನವಾಗಿದೆ. ಜಾರ್ಜ್ ವಿರುದ್ಧ ಹೆಣ್ತನಕ್ಕೆ ಅವಮಾನ ಮಾಡಿದ್ದಕ್ಕಾಗಿ ಸೆಕ್ಷನ್ 154 ಮತ್ತು 54 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ವರ್ಷದ ಫೆಬ್ರವರಿ 10 ರಂದು, ಸೋಲಾರ್ ಪ್ರಕರಣದ ಆರೋಪಿ ತಿರುವನಂತಪುರಂನ ಅತಿಥಿ ಗೃಹದಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ಸಂದೇಶಗಳನ್ನು ಕಳುಹಿಸಿರುವುದಾಗಿ ಗೌಪ್ಯ ಹೇಳಿಕೆ ನೀಡಿದ್ದಳು. ಇದನ್ನು ಆಧರಿಸಿ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ತಾಯಿಗೆ ಕರೆ ಮಾಡಿ ಕಿರುಕುಳ ನೀಡಿದವನಿಗೆ ಚಾಕುವಿನಿಂದ ಇರಿದ ಸಹೋದರರು!
ಮಾನವರಹಿತ ವಿಮಾನವನ್ನು ಯಶಸ್ವಿಯಾಗಿ ಹಾರಿಸಿದ ಭಾರತ
ಉದ್ದವಾಗಿ ಕೂದಲು ಬೆಳೆಸಿದ ವಿದ್ಯಾರ್ಥಿಗಳ ಕೂದಲಿಗೆ ಕತ್ತರಿ ಪ್ರಯೋಗ!
ಪರೀಕ್ಷೆಯಲ್ಲಿ ಫೇಲ್ ಆಗುವ ಭೀತಿ: ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!
ಭಾರೀ ಮಳೆ ಹಿನ್ನೆಲೆ: ನಾಳೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ