ಆಘಾತ: ಗಾಂಜಾ ಸಾಗಾಟದ ವೇಳೆ ಸಿಕ್ಕಿಬಿದ್ದ ಮಾಜಿ ರಣಜಿ ಆಟಗಾರ: ಅರೆಸ್ಟ್ ಆದ ಈ ಕ್ರಿಕೆಟಿಗ ಯಾರು..?
23 ಕೆಜಿ ಗಾಂಜಾ ಸಾಗಿಸುತ್ತಿದ್ದ ಶ್ರೀಕಾಕುಳಂ ಜಿಲ್ಲೆಯ ಮಾಜಿ ರಣಜಿ ಕ್ರಿಕೆಟಿಗನನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಮಾಜಿ ರಣಜಿ ಕ್ರಿಕೆಟಿಗನನ್ನು ಬುಡುಮೂರು ನಾಗರಾಜು ಎಂದು ಗುರುತಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಲಕ್ಷ್ಮಣರಾವ್ ಅವರು ಹೇಳಿದ್ದಾರೆ.
ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ಹೆದ್ದಾರಿಯ ವಿಜಯಾದಿತ್ಯ ಪಾರ್ಕ್‌ನಲ್ಲಿ ಸಿಬ್ಬಂದಿಯೊಂದಿಗೆ ಗಸ್ತು ತಿರುಗುತ್ತಿದ್ದಾಗ ಎರಡು ಚೀಲಗಳಲ್ಲಿ ಒಂಬತ್ತು ಪ್ಯಾಕೆಟ್‌ಗಳಲ್ಲಿ 23.475 ಕೆಜಿ ಗಾಂಜಾ ಹೊಂದಿದ್ದ ಆರೋಪಿಯನ್ನು ಬಂಧಿಸಲಾಯಿತು ಎಂದು ಇನ್ಸ್‌ಪೆಕ್ಟರ್ ರಾವ್ ತಿಳಿಸಿದ್ದಾರೆ.
ನಾಗರಾಜು ವಿರುದ್ಧ 25 ವಂಚನೆ ಪ್ರಕರಣಗಳು, ಎರಡು ಅಬಕಾರಿ ಪ್ರಕರಣಗಳು ಮತ್ತು ಎರಡು ಗಾಂಜಾ ಪ್ರಕರಣಗಳು ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw