11:25 AM Wednesday 12 - March 2025

ಅಬಕಾರಿ ಅಧಿಕಾರಿಗಳಿಂದ ಮೂಡಿಗೆರೆಯಲ್ಲಿ ದಾಳಿ: ಕಳ್ಳಭಟ್ಟಿ ವಶ

mudigere
11/03/2025

ಕೊಟ್ಟಿಗೆಹಾರ: ಅಬಕಾರಿ ಇಲಾಖೆ ಅಧಿಕಾರಿಗಳು ಮೂಡಿಗೆರೆ ತಾಲ್ಲೂಕಿನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಕಳ್ಳಭಟ್ಟಿಯನ್ನ ವಶಪಡಿಸಿಕೊಂಡಿದ್ದಾರೆ.

ರೂಪ ಎಂ., ಅಬಕಾರಿ ಉಪ ಆಯುಕ್ತರು, ಚಿಕ್ಕಮಗಳೂರು ಜಿಲ್ಲೆ, ಹಾಗೂ ಸಂತೋಷ್ ಕುಮಾರ್ ಕೆ.ಜಿ., ಅಬಕಾರಿ ಅಧೀಕ್ಷಕರು, ಇವರ ನಿರ್ದೇಶನದಲ್ಲಿ ಎಂ.ಆರ್. ಶೇಖರ್, ಉಪ ಅಧೀಕ್ಷಕರು, ಮೂಡಿಗೆರೆ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆಯಿತು.

ಮೂಡಿಗೆರೆ ತಾಲ್ಲೂಕಿನ ಕಣಚೂರು ಗ್ರಾಮದ ನಾಗೇಶ ಶೆಟ್ಟಿ ಬಿನ್ ಈರಶೆಟ್ಟಿ ಎಂಬಾತನ ಮನೆಯಲ್ಲಿ ನಡೆಸಿದ ದಾಳಿಯಲ್ಲಿ 30 ಲೀಟರ್ ಕಳ್ಳಭಟ್ಟಿ ತಯಾರಿಸುವ ಬೆಲ್ಲದ ಕೊಳೆ ವಶಪಡಿಸಿಕೊಳ್ಳಲಾಗಿದೆ.

ಇದೆ ಸಂದರ್ಭದಲ್ಲಿ, ಪುಟ್ಟಸ್ವಾಮಿ ಬಿನ್ ಲೇಟ್ ರಾಮ ಶೆಟ್ಟಿ ಅವರ ವಾಸದ ಮನೆಯಲ್ಲಿ ನಡೆಸಿದ ದಾಳಿಯಲ್ಲಿ 05 ಲೀಟರ್ ಕಳ್ಳಭಟ್ಟಿ ಸಾರಾಯಿ ಪತ್ತೆಯಾಗಿದೆ. ಸದರಿ ಇಬ್ಬರು ಆರೋಪಿಗಳ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.

ಈ ದಾಳಿ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಲೋಕೇಶ್ ಸಿ, ಪೃಥ್ವಿ ಬಿ.ಎಸ್., ಹಾಗೂ ಸಿಬ್ಬಂದಿಗಳಾದ ಶಿವಣ್ಣ, ರಮೇಶ್ ತುಳುಜಣ್ಣನವರ್, ಸುರೇಶ್ ಕಲ್ಯಾಡ್ರ, ರಮೇಶ್ ಹಾಗೂ ವಾಹನ ಚಾಲಕರಾದ ಅನೂಪ್ ಮತ್ತು ಪ್ರವೀಣ್ ಕುಮಾರ್ ಭಾಗಿಯಾಗಿದ್ದರು.


ಅಬಕಾರಿ ಇಲಾಖೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲು ಹಾಗೂ ಅಕ್ರಮ ಮದ್ಯ ನಿಷೇಧಿಸಲು ಮುಂದಾಗಿದ್ದು, ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

–ಅಬಕಾರಿ ಇಲಾಖೆ, ಚಿಕ್ಕಮಗಳೂರು ಜಿಲ್ಲೆ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ

Exit mobile version