ರಾವಣನ ಪ್ರತಿಕೃತಿ ದಹಿಸುತ್ತಿದ್ದಾಗ ಭೀಕರ ಸ್ಫೋಟ | ಸುಡಲು ಬಂದವರೇ ಸುಟ್ಟು ಹೋಗುತ್ತಿದ್ದರು!

26/10/2020

ಬಟಾಲಾ: ದಸರ ಸಂದರ್ಭದಲ್ಲಿ ರಾವಣನ ಪ್ರತಿಕೃತಿ ಸುಡುವ ವಿಕೃತ ಆಚರಣೆ ನಡೆಯುತ್ತಲೇ ಇದೆ. ಕಾಂಗ್ರೆಸ್ ನಾಯಕರು ಕೂಡ ರಾವಣ ದಹನವನ್ನ ಆಯೋಜಿಸುತ್ತಿದ್ದಾರೆ. ಇಲ್ಲೊಬ್ಬ ಕಾಂಗ್ರೆಸ್ ನಾಯಕ ರಾವಣ ದಹನದ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕಿದ್ದು, ಸ್ವಲ್ಪದರಲ್ಲೇ ಪಾರಾಗಿದ್ದಾನೆ.

ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಶಾಸಕ ಅಶ್ವನಿ ಸೆಖ್ರಿ  ನೇತೃತ್ವದಲ್ಲಿ ಪಂಜಾಬ್‌ನ ಬಟಾಲಾ ಡಿಎವಿ ಶಾಲೆಯ ಸಮೀಪ ಮೈದಾನದಲ್ಲಿ ಈ ವಿಕೃತ ಆಚರಣೆ ನಡೆದಿತ್ತು. ರಾವಣನ ಬೃಹತ್ ಪ್ರತಿಕೃತಿಗೆ ಬೆಂಕಿ ಹಚ್ಚುತ್ತಿದ್ದಾಗಲೇ ಭಾರೀ ಸ್ಫೋಟ ಸಂಭವಿಸಿದೆ.

ರಾವಣ ಪ್ರತಿಕೃತಿ ದಹಿಸುತ್ತಿದ್ದಾಗ ಭೀಕರ ಸ್ಫೋಟ

ರಾವಣನನ್ನು ಸುಟ್ಟು ಖುಷಿಪಡಲು ಬಂದಿದ್ದವರೆಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಲು ಆರಂಭಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕ ಸೆಖ್ರಿ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.

ರಾವಣನ ಪ್ರತಿಕೃತಿ ಸುಡುವ ಸಂದರ್ಭದಲ್ಲಿ ಪ್ರತಿ ಬಾರಿಯೂ ಅವಘಡ ಸಂಭವಿಸುತ್ತಿವೆ. ಇಂತಹ ವಿಕೃತ ಆಚರಣೆ ಯಾಕೆ ಎನ್ನುವುದು ಇನ್ನೂ ಪ್ರಶ್ನಾರ್ಹವೇ ಆಗಿದೆ.

Hrudaya Kasi Maduve | He Hrudaya | Kannada Album Song | Digitalax Infomania Production

ಇತ್ತೀಚಿನ ಸುದ್ದಿ

Exit mobile version