ಫೇಸ್ ಬುಕ್ ನಲ್ಲಿ ಮತ್ತೇರಿಸಿ ಮನೆಗೆ ಕರೆಯುತ್ತಿದ್ದ ಮಹಿಳೆಯರು | ಅಲ್ಲಿಗೆ ಹೋದ ಯುವಕರ ಪರಿಸ್ಥಿತಿ ಏನಾಗಿದೆ ಗೊತ್ತಾ? - Mahanayaka
4:04 PM Thursday 12 - December 2024

ಫೇಸ್ ಬುಕ್ ನಲ್ಲಿ ಮತ್ತೇರಿಸಿ ಮನೆಗೆ ಕರೆಯುತ್ತಿದ್ದ ಮಹಿಳೆಯರು | ಅಲ್ಲಿಗೆ ಹೋದ ಯುವಕರ ಪರಿಸ್ಥಿತಿ ಏನಾಗಿದೆ ಗೊತ್ತಾ?

18/01/2021

ಮಂಗಳೂರು: ಹನಿಟ್ರಾಪ್ ಮೂಲಕ ಹಣ ದೋಚುತ್ತಿದ್ದ ಜಾಲವೊಂದನ್ನು ಸುರತ್ಕಲ್ ಪೊಲೀಸರು ಬೇಧಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿ, ಆ ಬಳಿಕ ಬ್ಲ್ಯಾಕ್ ಮೇಲ್ ಮಾಡಿ ತಂಡವೊಂದು ಹಣ ದೋಚುತ್ತಿತ್ತು.

ರೇಶ್ಮಾ ಯಾನೆ ನೀಮಾ(32), ಇಕ್ಲಾಬ್ ಮಹಮ್ಮದ್ ಯಾನೆ ಇಕ್ಬಾಲ್(35) ಝೀನ್ ಯಾನೆ ಝೀನತ್ ಮುಬೀನ್(28), ನಾಸಿಫ್ ಯಾನೆ ಅಬ್ದುಲ್ ಖಾದರ್ ನಾಝಿಫ್(34) ಬಂಧಿತ ಆರೋಪಿಗಳಾಗಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ  4-5 ಆರೋಪಿಗಳು ಶಾಮೀಲಾಗಿರುವ  ಅನುಮಾನ ಇದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ರೇಶ್ಮಾ ಮತ್ತು ಝೀನತ್  ಸಾಮಾಜಿಕ ಜಾಲತಾಣಗಳಲ್ಲಿ ಯುವಕರನ್ನು ಪರಿಚಯ ಮಾಡಿಕೊಂಡು, ತಾನು ಒಬ್ಬಂಟಿಯಾಗಿದ್ದೇನೆ. ನೀನು ನನ್ನ ಮನೆಗೆ ಬಾ ಎಂದು ಮತ್ತೇರಿಸಿ ಕರೆಯುತ್ತಿದ್ದರು. ಮನೆಗೆ ಬಂದವರನ್ನು ಇಕ್ಬಾಲ್ ಹಾಗೂ ಅಬ್ದುಲ್ ಖಾದರ್ ನಾಸಿಫ್ ಸಹಾಯದಿಂದ ಬೆದರಿಸಿ ಹಲ್ಲೆ ನಡೆಸಿ ಬ್ಲ್ಯಾಕ್ ಮೇಲ್ ನಡೆಸಿ ಅವರಿಂದ ಹಣ ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳಿಂದ ನಾಲ್ಕು ಮೊಬೈಲ್ ಫೋನ್, ಎಟಿಎಂ ಸೇರಿದಂತೆ 5 ಕ್ರೆಡಿಟ್ ಕಾರ್ಡ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆಯ ವೇಳೆ ಐದಾರು ಜನರು ಇವರ ಬ್ಲ್ಯಾಕ್ ಮೇಲ್ ಗೆ ಬಿದ್ದು ಹಣಕಳೆದುಕೊಂಡಿರುವುದು ತಿಳಿದು ಬಂದಿದೆ. ಮರ್ಯಾದೆಗೆ ಅಂಜಿ ಕೆಲವರು ದೂರು ನೀಡಿಲ್ಲ. ಇದು ಆರೋಪಿಗಳಿಗೆ ಬಂಡವಾಳವಾಗಿದೆ. ಇಂತಹ ಘಟನೆ ನಡೆದಾಗ ಪೊಲೀಸರಿಗೆ ದೂರು ನೀಡಿ, ನಿಮ್ಮ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ಕಮಿಷನರ್ ಶಶಿಕುಮಾರ್ ಮನವಿ ಮಾಡಿದರು.

ಇತ್ತೀಚಿನ ಸುದ್ದಿ