ಫ್ಯಾಕ್ಟ್ ಚೆಕ್: ಚೀಲದಲ್ಲಿ ಹಣ ಇರುವ ವಿಡಿಯೋ ವೈರಲ್: ಇದು ಭಾರತದಲ್ಲ, ಬಾಂಗ್ಲಾದ ಚಿತ್ರಣ..! - Mahanayaka
9:43 PM Thursday 19 - September 2024

ಫ್ಯಾಕ್ಟ್ ಚೆಕ್: ಚೀಲದಲ್ಲಿ ಹಣ ಇರುವ ವಿಡಿಯೋ ವೈರಲ್: ಇದು ಭಾರತದಲ್ಲ, ಬಾಂಗ್ಲಾದ ಚಿತ್ರಣ..!

08/06/2023

ಮೊನ್ನೆಯಿಂದ ಮಸೀದಿಯಂತೆ ಕಾಣುವ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಹಣವನ್ನು ತುಂಬುತ್ತಿರುವುದನ್ನು ತೋರಿಸುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರ ಜೊತೆಗೆ ಕೋಮು ದ್ವೇಷದ ಪೋಸ್ಟ್ ಗಲೂ ಹರಿದಾಡುತ್ತಿದ್ದು, ಅದರಲ್ಲಿ ಮಸೀದಿಗಳಲ್ಲಿ ಸಂಗ್ರಹವಾಗುವ ಹಣಕ್ಕೆ ತೆರಿಗೆ ಇಲ್ಲ. ಈ ಹಣವನ್ನು ಮತಾಂತರ, ಭಯೋತ್ಪಾದನೆ ಮತ್ತು ಲವ್ ಜಿಹಾದ್ ಮಾಡಲು ಬಳಸಲಾಗುತ್ತದೆ ಎಂಬ ಬರಹದೊಂದಿಗೆ ಈ ವಿಡಿಯೊ ಶೇರ್ ಆಗುತ್ತಿದೆ.

ಸತ್ಯಾಂಶ ಏನು..?

ಈ ವೈರಲ್ ವಿಡಿಯೊದ ಫ್ಯಾಕ್ಟ್ ಚೆಕ್ ಮಾಡಿದ ದಿ ಕ್ವಿಂಟ್, ವಿಡಿಯೊ ಮಸೀದಿಯದ್ದಾಗಿದ್ದರೂ ಇದು ಭಾರತದ್ದಲ್ಲ. ಇದು ಬಾಂಗ್ಲಾದೇಶದ ಕಿಶೋರ್‌ಗಂಜ್‌ನಲ್ಲಿರುವ ಪಾಗ್ಲಾ ಮಸೀದಿಯ ಚಿತ್ರಣ. ಹಣದ ಎಣಿಕೆಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಇಲ್ಲಿನ ಕಾಣಿಕೆ ಡಬ್ಬಿಯನ್ನು ತೆರೆಯಲಾಗುತ್ತದೆ.


Provided by

ಆದರೆ ಈ ವೈರಲ್ ವಿಡಿಯೊದಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಹಣ ತುಂಬುತ್ತಿರುವುದನ್ನು ಕಾಣಬಹುದು. ಈ ಪ್ಲಾಸ್ಟಿಕ್ ಬ್ಯಾಗ್ ಮೇಲೆ ಬರೆದ ಪಠ್ಯವನ್ನು ಜೂಮ್ ಮಾಡಿ ನೋಡಿದರೆ ಅದು ಬಂಗಾಳಿಯಲ್ಲಿದೆ. ಅದನ್ನು ಇಂಗ್ಲಿಷ್‌ಗೆ ಅನುವಾದಿಸಿದಾಗ, ‘In coal, Broiler and BG ಎಂದು ತೋರಿಸುತ್ತದೆ.

ಗೂಗಲ್ ನಲ್ಲಿ Bangla, mosque and money- ಹೀಗೆ ಕೀವರ್ಡ್‌ಗಳಿಂದ ಹುಡುಕಿದಾಗ ಮೇ 7 ರಂದು ಪ್ರಕಟವಾದ ಡೈಲಿ ಸ್ಟಾರ್ ನಲ್ಲಿ ಈ ಕುರಿತಾದ ವರದಿ ಇದೆ. ಈ ವರದಿಯಲ್ಲಿ ವೈರಲ್ ವಿಡಿಯೊದಲ್ಲಿರುವ ಅದೇ ಸ್ಥಳವಿದೆ. ಅದು ಬಾಂಗ್ಲಾದೇಶದ ಕಿಶೋರೆಗಂಜ್ ಪಾಗ್ಲಾ ಮಸೀದಿ.

ಜನವರಿಯಲ್ಲಿ 7ರಂದು ಬಿಸಿನೆಸ್ ಸ್ಟ್ಯಾಂಡರ್ಡ್‌ನಲ್ಲಿ ಪ್ರಕಟವಾದ ಸುದ್ದಿಯಲ್ಲಿ ಪಾಗ್ಲಾ ಮಸೀದಿಯಲ್ಲಿ ಸಂಗ್ರಹಿಸಿದ ಹಣವನ್ನು ಎಣಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ದೇಣಿಗೆ ಪೆಟ್ಟಿಗೆಗಳನ್ನು ತೆರೆಯಲಾಗುತ್ತದೆ ಎಂದು ಹೇಳಿದೆ. ಈ ಹಣವನ್ನು ಇತರ ಮಸೀದಿಗಳು, ಮದರಸಾಗಳ ಅಭಿವೃದ್ಧಿ ಮತ್ತು ಸಾಮಾಜಿಕ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ಈ ವರದಿ ಹೇಳಿದೆ.

ಇನ್ನು ಈ ಕುರಿತು ದಿ ಕ್ವಿಂಟ್‌ನೊಂದಿಗೆ ಮಾತನಾಡಿದ ಬಾಂಗ್ಲಾದೇಶದ ಚಾನೆಲ್ I ನ ಸಿಬ್ಬಂದಿ ವರದಿಗಾರ್ತಿ ಹಬೀಬಾ ನಜ್ನಿನ್, ಕಿಶೋರೆಗಂಜ್‌ನ ಪಾಗ್ಲಾ ಮಸೀದಿಯಲ್ಲಿ ದೇಣಿಗೆ ಪೆಟ್ಟಿಗೆಗಳ ಎಣಿಕೆ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುತ್ತದೆ ಎಂದಿದ್ದಾರೆ.

ಅಷ್ಟೇ ಅಲ್ಲ, ಬಾಂಗ್ಲಾದೇಶ ಸುದ್ದಿ ವಾಹಿನಿ ಸೊಮೊಯ್ ಟಿವಿ ಮೇ 6 ರಂದು ಪೋಸ್ಟ್ ಮಾಡಿದ ಯೂಟ್ಯೂಬ್ ವಿಡಿಯೊದಲ್ಲಿ ಕೂಡಾ ಈ ವೈರಲ್ ವಿಡಿಯೊದಲ್ಲಿರುವ ದೃಶ್ಯಗಳನ್ನು ಕಾಣಬಹುದು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAwf

ಇತ್ತೀಚಿನ ಸುದ್ದಿ