‘ಫಲ್ಸಾನ್ ಅಲ್ ಅಕ್ಸ್’ ವಿಡಿಯೋ ಗೇಮ್ ಇನ್ನಿಲ್ಲ! ಫೆಲೆಸ್ತೀನ್ ಪರ ನಿಂತಿದ್ದಕ್ಕೆ ಕ್ರಮ
ವಿಡಿಯೋ ಗೇಮ್ಸ್ ಆಗಿರುವ ‘ಫಲ್ಸಾನ್ ಅಲ್ ಅಕ್ಸ್ ‘ಸ್ಟೀಮ್ ಸ್ಟೋರಿಯಿಂದ ತೆರವುಗೊಳಿಸಿರುವುದಾಗಿ ಗೇಮ್ಸ್ ಡೆವಲಪರ್ ಕಂಪನಿ ಆಗಿರುವ ವಾಲ್ ವ್ ಕಾರ್ಪೊರೇಷನ್ ತಿಳಿಸಿದೆ. ಅಧಿಕಾರಿಗಳ ನಿರ್ದೇಶನ ಪ್ರಕಾರ ಈ ಗೇಮ್ಸ್ ಅನ್ನು ತೆರವುಗೊಳಿಸಿರುವುದಾಗಿ ವಾಲ್ ವ್ ಸ್ಪಷ್ಟಪಡಿಸಿದೆ.
ಇಸ್ರೇಲ್ ಮತ್ತು ಫೆಲೆಸ್ತೀನ್ ಸಂಘರ್ಷದಲ್ಲಿ ಫೆಲೆಸ್ತೀನ್ ಪರ ನಿಲುವನ್ನು ಗೇಮ್ಸ್ ಪ್ರಚಾರ ಮಾಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಗೇಮ್ಸ್ ಅನ್ನು ತೆರವುಗೊಳಿಸಲಾಗಿದೆ.
ವಾಲ್ವ್ ಕಂಪನಿಗೆ ಬ್ರಿಟನಿನ ಭಯೋತ್ಪಾದನಾ ವಿರೋಧಿ ಇಂಟರ್ನೆಟ್ ರೆಫೆರಲ್ ಯೂನಿಟ್ ಈ ನಿರ್ದೇಶನ ನೀಡಿತ್ತು. ಈ ನಿರ್ದೇಶನವನ್ನು ಈ ಗೇಮ್ಸ್ ತಯಾರಿಕಾ ಕಂಪನಿಯಾದ ನಿಧಾಲ್ ನಜೀಮ್ ಗೆ ಇಮೇಲ್ ಮೂಲಕ ತಿಳಿಸಲಾಗಿತ್ತು.
ಫರ್ ಸಾನ್ ಅಲ್ ಅಕ್ಸ’ ಗೇಮ್ಸ್ ಅನ್ನು ಈ ಮೊದಲು ಆಸ್ಟ್ರೇಲಿಯ ಮತ್ತು ಜರ್ಮನಿ ಕೂಡ ನಿಷೇಧಿಸಿತ್ತು. ಏಜ್ ರೇಟಿಂಗ್ ಅನ್ನು ತೋರಿಸಿ ಈ ಎರಡು ರಾಷ್ಟ್ರಗಳು ಈ ಗೇಮ್ ಅನ್ನು ನಿಷೇಧಿಸಿದ್ದವು.
2022 ರಲ್ಲಿ ಪರ್ ಸಾನ್ ಅಲ್ ಅಕ್ಸ ಗೇಮ್ಸ್ ರಿಲೀಸ್ ಆಗಿತ್ತು. ಆ ಬಳಿಕ ಹಲವು ಬದಲಾವಣೆಗಳ ಮೂಲಕ ಅಪ್ಡೇಟ್ ಮಾಡಲಾಗಿತ್ತು. ಕಳೆದು ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ಬಳಿಕ ಕೆಲವು ಬದಲಾವಣೆಗಳನ್ನು ಮಾಡಿ ಅಪ್ಡೇಟ್ ಮಾಡಲಾಗಿತ್ತು. ಈ ಬದಲಾವಣೆಯನ್ನೇ ತೋರಿಸಿ ಬ್ರಿಟನ್ ನಿಷೇಧಕ್ಕೆ ಸಮರ್ಥನೆ ನೀಡಿದೆ.
ಆದರೆ ಈ ಗೇಮ್ಸ್ ಅನ್ನು ತಯಾರಿಸಿದ ನಿದಾಲ್ ಅಜೀಮ್ ಕಂಪನಿ ತನ್ನನ್ನು ಸಮರ್ಥಿಸಿಕೊಂಡಿದೆ ಮತ್ತು ಬ್ರಿಟನ್ ನ ದ್ವಿಮುಖ ಧೋರಣೆಯನ್ನು ಪ್ರಶ್ನಿಸಿದೆ. ಇಂಥದ್ದೇ ಇತರ ಗೇಮ್ಸ್ ಗಳಿಗೆ ಬ್ರಿಟನ್ನಲ್ಲಿ ಅನುಮತಿ ಇದೆ, ಆದರೆ ನಮಗೆ ಮಾತ್ರ ನಿಷೇಧ ವಿಧಿಸಲಾಗಿದೆ ಎಂದು ಕಂಪನಿ ಆರೋಪಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj