ಮಹಿಳೆಯರಿಗೆ ಕಿರುಕುಳ | ಖ್ಯಾತ ನಟ ಅರೆಸ್ಟ್
03/11/2020
ಮಧ್ಯಪ್ರದೇಶ: ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಬಾಲಿವುಡ್ ನಟ ವಿಜಯ್ ರಾಜ್ ನನ್ನು ಬಂಧಿಸಲಾಗಿದ್ದು, ಚಿತ್ರೀಕರಣದ ಸೆಟ್ ನಲ್ಲಿ ಈತ ಮಹಿಳಾ ಸದಸ್ಯರಿಗೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಮಧ್ಯಪ್ರದೇಶದ ಶೆರ್ನಿಯ ಸೆಟ್ ನಲ್ಲಿ ವಿಜಯ್ ರಾಜ್ ಮಹಿಳಾ ಸಿಬ್ಬಂದಿ ಸದಸ್ಯರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನನ್ನು ಮಹಾರಾಷ್ಟ್ರದ ಗೊಮಡಿಯಾದಿಂದ ಬಂಧಿಸಲಾಗಿದೆ.
ಬಂಧನಕ್ಕೊಳಗಾಗಿರುವ ನಟನ ಮೇಲೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಹಾರಾಷ್ಟ್ರದ ಗೊಂಡಿಯಾದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅತುಲ್ ಕುಲಕರ್ಣಿ ತಿಳಿಸಿದ್ದಾರೆ.