ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿನಿಯ ತಲೆಗೆ ಬಿದ್ದ ಸೀಲಿಂಗ್ ಫ್ಯಾನ್! - Mahanayaka
3:28 PM Wednesday 5 - February 2025

ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿನಿಯ ತಲೆಗೆ ಬಿದ್ದ ಸೀಲಿಂಗ್ ಫ್ಯಾನ್!

fan falls
03/05/2022

ಹೈದರಾಬಾದ್: ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿ ಮೇಲೆ ಸೀಲಿಂಗ್ ಫ್ಯಾನ್ ಬಿದ್ದು, ವಿದ್ಯಾರ್ಥಿನಿ ಗಾಯಗೊಂಡ ಘಟನೆ ಆಂಧ್ರಪ್ರದೇಶದ ಶ್ರೀಸತ್ಯ ಸಾಯಿ ಜಿಲ್ಲೆಯಲ್ಲಿ ನಡೆದಿದೆ.

ಗಾಯಗೊಂಡ ವಿದ್ಯಾರ್ಥಿನಿಗೆ ತಕ್ಷಣವೇ ಚಿಕಿತ್ಸೆ ಕೊಡಲಾಗಿದ್ದು, ಆಕೆ ಸುಧಾರಿಸಿಕೊಂಡ ಬಳಿಕ ಪರೀಕ್ಷೆ ಬರೆಸಲಾಗಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಸರ್ಕಾರವನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿವೆ.

ಪರೀಕ್ಷೆಗಿಂತ ಎರಡು ದಿನದ ಮುಂಚೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆವು. ಆದರೂ ಈ ರೀತಿಯ ಘಟನೆ ನಡೆದಿರುವುದು ದುರದೃಷ್ಟಕರ ಎಂದು ಘಟನೆ ಸಂಬಂಧ ಶಾಲೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ  ಸ್ಥಿತಿ ಎಲ್ಲಾ ರಾಜ್ಯಗಳಲ್ಲಿ ಇದೇ ರೀತಿಯಲ್ಲಿವೆ. ಪರೀಕ್ಷೆಗೆ ಕೊಠಡಿ ಸಜ್ಜು ಮಾಡುವುದೆಂದರೆ, ಪುರಾತನ ಕಾಲದ ಡೆಸ್ಕ್ ಗಳನ್ನು ಜೋಡಿಸಿ, ರಿಜಿಸ್ಟರ್ ನಂಬರ್ ಬರೆದಿಡುವುದು ಅಷ್ಟೇ ಎಂಬಂತಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನೈಟ್ ಕ್ಲಬ್ ನಲ್ಲಿ ರಾಹುಲ್ ಗಾಂಧಿ?:  ಏನಿದು ವೈರಲ್ ವಿಡಿಯೋ?

ಟೋಲ್ ಸಂಗ್ರಹ: ಫಾಸ್ಟ್ ಟ್ಯಾಗ್ ವ್ಯವಸ್ಥೆ ಶೀಘ್ರವೇ ರದ್ದು!

ವಿವಾಹ ವಾರ್ಷಿಕೋತ್ಸವದಂದೇ ಅಪಘಾತದಲ್ಲಿ ಕಾನ್ ಸ್ಟೇಬಲ್ ಸಾವು

ಶಾವರ್ಮಾದಲ್ಲಿ ಬಳಸುವ ಮಯೋನೆಸ್ ಎಷ್ಟು ಅಪಾಯಕಾರಿ?

ಇತ್ತೀಚಿನ ಸುದ್ದಿ