10:13 PM Wednesday 12 - March 2025

ಧರಣಿ ನಡೆಸುವ ರೈತರು ಭಯೋತ್ಪಾದಕರು | ನಾಲಿಗೆ ಹರಿಯಬಿಟ್ಟ ಕೃಷಿ ಸಚಿವ ಬಿ.ಸಿ.ಪಾಟೀಲ್

26/01/2021

ಕೊಪ್ಪಳ: ದೆಹಲಿಯಲ್ಲಿ ಧರಣಿ ಮಾಡುತ್ತಿರುವ ರೈತರು ಭಯೋತ್ಪಾದಕರು. ಈ ರೈತರಿಗೆ ಕಾಂಗ್ರೆಸ್ ಹಾಗೂ ಪಾಕಿಸ್ತಾನದ ಬೆಂಬಲವಿದೆ ಎಂದು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.

 

ರೈತರು ಎಂದಿಗೂ ಕಾನೂನು ಕೈಗೆತ್ತಿಕೊಳ್ಳುವುದಿಲ್ಲ. ಆದರೆ, ದೆಹಲಿಯಲ್ಲಿ ರೈತ ಪ್ರತಿಭಟನಾಕಾರರು ಕೆಂಪುಕೋಟೆಯ ಬಳಿ ಹೋಗಿ ಬಾವುಟ ಹಾರಿಸಿದ್ದಾರೆ. ಇದನ್ನು ನೋಡಿದರೆ ಅವರಿಗೆ ಭಯೋತ್ಪಾದಕರ ಬೆಂಬಲ ಇದೆ ಎಂದು ಅರ್ಥವಾಗುತ್ತದೆ ಎಂದು ಬಿ.ಸಿ.ಪಾಟೀಲ್ ನಾಲಿಗೆ ಹರಿಯಬಿಟ್ಟಿದ್ದಾರೆ.

 

ಪ್ರಧಾನಿ ನರೇಂದ್ರ ಮೋದಿ ಜನಪ್ರತಿಯತೆ ಕಂಡು ಕಾಂಗ್ರೆಸ್ ನವರು ಹತಾಶರಾಗಿದ್ದಾರೆ. ಮೋದಿ ಸರ್ಕಾರವನ್ನು ಅಲುಗಾಡಿಸಲು ಆಗದೇ ಭಯೋತ್ಪಾದಕರನ್ನು ಕರೆತಂದು ಅವರಿಗೆ ರೈತರ ಹೆಸರಿಟ್ಟು ಭಯೋತ್ಪಾದನೆ ಮಾಡಿಸಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ ಎಂದು ನಾಲಿಗೆ ಹರಿಯಬಿಟ್ಟಿದ್ದಾರೆ.

ಇತ್ತೀಚಿನ ಸುದ್ದಿ

Exit mobile version