ಮೊಳೆ ನೆಟ್ಟ ಪೊಲೀಸರಿಗೆ, ಹೂವಿನ ಗಿಡ ನೆಟ್ಟು ಶಾಂತಿಯ ಸಂದೇಶ ನೀಡಿದ ರೈತರು

06/02/2021

ನವದೆಹಲಿ: ರೈತರ ಪ್ರತಿಭಟನೆಯನ್ನು ತಡೆಯಲು ಹೆದ್ದಾರಿಗಳಲ್ಲಿ ಮುಳ್ಳಿನ ಮೊಳೆ ಹಾಕಿದ್ದ ಜಾಗದಲ್ಲಿ ಪ್ರತಿಭಟನಾ ನಿರತ ರೈತರು ಹೂವಿನ ಗಿಡ ನೆಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಶಾಂತಿಯ ಸಂದೇಶ ನೀಡಿದ್ದಾರೆ.

ಮೊಳೆ ಹಾಕಿರುವ ಜಾಗದಲ್ಲಿ ರೈತರು ಹೂವಿನ ಗಿಡ ನೆಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪೊಲೀಸರು ನೆಟ್ಟಿರುವ ಮೊಳೆಯ ಜಾಗದಲ್ಲಿ ರೈತರು ಹೂವಿನ ಗಿಡ ನೆಟ್ಟಿದ್ದಾರೆ.

ರೈತರ ಪ್ರತಿಭಟನೆಯನ್ನು ತಡೆಯಲು ಪೊಲೀಸರು  ಗಾಜಿಪುರ ಗಡಿಯಲ್ಲಿ ಮೊಳೆ ಹಾಕಿ, ಸಿಮೆಂಟ್ ಹಾಕಿ ಬ್ಯಾರಿಕೇಡ್ ಗಳನ್ನು ನಿರ್ಮಿಸಲಾಗಿತ್ತು. ಆದರೂ ದೆಹಲಿ ಗಡಿಯಲ್ಲಿ ಈಗಲೂ ರೈತರು ತೀವ್ರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಟ್ರ್ಯಾಕ್ಟರ್ ಪರೇಡ್ ಬಳಿಕ ಚಕ್ಕಾ ಜಾಮ್ ಮೂಲಕ ಮತ್ತೊಮ್ಮೆ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ.

ಇತ್ತೀಚಿನ ಸುದ್ದಿ

Exit mobile version