ಸೆಪ್ಟಂಬರ್ 27ರಂದು ಭಾರತ್ ಬಂದ್: ಕೇಂದ್ರ ಸರ್ಕಾರದ ವಿರುದ್ಧ ತೀವ್ರತೆ ಪಡೆದ ರೈತರ ಹೋರಾಟ - Mahanayaka

ಸೆಪ್ಟಂಬರ್ 27ರಂದು ಭಾರತ್ ಬಂದ್: ಕೇಂದ್ರ ಸರ್ಕಾರದ ವಿರುದ್ಧ ತೀವ್ರತೆ ಪಡೆದ ರೈತರ ಹೋರಾಟ

bharat bandh
05/09/2021

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಿತ ಕೃಷಿ ಕಾನೂನಿನ ವಿರುದ್ಧ ರೈತರ ಹೋರಾಟ ಮತ್ತೆ ತೀವ್ರತೆ ಪಡೆದುಕೊಂಡಿದ್ದು,  ಇದೀಗ ರೈತರು ಪ್ರಬಲವಾದ ಹೋರಾಟಕ್ಕೆ ಮುಂದಾಗಿದ್ದು, ಸೆಪ್ಟಂಬರ್ 27ರಂದು ಭಾರತ್ ಬಂದ್ ಗೆ ರೈತ ಸಂಘಟನೆಗಳು ಕರೆ ನೀಡಿವೆ.

ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ಕಿಸಾನ್ ಒಕ್ಕೂಟದ ಅಧ್ಯಕ್ಷ ರಾಕೇಶ್ ಟಿಕಾಯತ್, ಸೆಪ್ಟಂಬರ್ 27ರಂದು ಭಾರತ್ ಬಂದ್ ಗೆ ಕರೆ ನೀಡಿದ್ದೇವೆ. ಅಂದು  ಕೇಂದ್ರ ಸರ್ಕಾರದ ವಿರುದ್ಧ ಬಹಳ ಪರಿಣಾಮಕಾರಿಯಾಗಿ ನಮ್ಮ ಹಕ್ಕುಗಳನ್ನು ಮಂಡಿಸುತ್ತೇವೆ ಎಂದು ತಿಳಿಸಿದ್ದಾರೆ.

ಪಂಜಾಬ್ ನ 32 ರೈತ ಸಂಘಟನೆಗಳ ಕಾರ್ಯಕರ್ತರ ಮೇಲೆ ದಾಖಲಿಸಿರುವ ಕೇಸುಗಳನ್ನು ವಾಪಸ್ ಪಡೆಯಲು ಒತ್ತಾಯಿಸುತ್ತಿದ್ದೇವೆ. ಇದಕ್ಕಾಗಿ ಸೆ.8ರವರೆಗೆ ಸರ್ಕಾರಕ್ಕೆ ಗಡುವು ನೀಡುತ್ತೇವೆ ಎಂದು ಟಿಕಾಯತ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ನನ್ನ ವಿರುದ್ಧದ ಆರೋಪ ಸಾಬೀತಾದರೆ, ಸಾರ್ವಜನಿಕವಾಗಿ ನೇಣಿಗೇರುತ್ತೇನೆ | ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್ ಬ್ಯಾನರ್ಜಿ ಹೇಳಿಕೆ

ತಾಲಿಬಾನಿಗಳ ವಿರುದ್ಧ ಸಿಡಿದೆದ್ದ ಅಮ್ರುಲ್ಲಾ ಸಾಲೇಹ್ ಯಾರು? | ಜೈಲಿನಲ್ಲಿ ತಾಲಿಬಾನಿಗರ ದಂಗೆಯನ್ನು ಇವರು ಎದುರಿಸಿದ್ದು ಹೇಗೆ?

ವಿವಾದಿತ ಕೃಷಿ ಕಾಯ್ದೆ ವಾಪಸ್ ಪಡೆಯದಿದ್ದರೆ ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತೇವೆ | ರೈತ ನಾಯಕರಿಂದ ಎಚ್ಚರಿಕೆ

ಕಾಂಗ್ರೆಸ್ ನವರು ಚಳುವಳಿ ಮಾಡುವಷ್ಟರ ಮಟ್ಟಿಗೆ ಬೆಲೆ ಏರಿಕೆಯಾಗಿಲ್ಲ | ಸಿ.ಟಿ.ರವಿ ಹೇಳಿಕೆ

ಗಣೇಶೋತ್ಸವಕ್ಕೆ ಷರತ್ತು ಬದ್ಧ ಅವಕಾಶ | ಸಂಘಟಕರು ಈ ನಿಯಮಗಳನ್ನು ಪಾಲಿಸಲೇ ಬೇಕು!

ತಡರಾತ್ರಿ ಫೋನ್ ನಲ್ಲಿ ಮಾತನಾಡಿದ್ದಕ್ಕೆ ಪತ್ನಿಯನ್ನು ಗುಂಡಿಟ್ಟು ಕೊಂದ ಪತಿ!

ಇತ್ತೀಚಿನ ಸುದ್ದಿ