ಪೊಲೀಸರ ಲಾಠಿ ಚಾರ್ಜ್ ವಿರುದ್ಧ ಕತ್ತಿ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ ರೈತರು - Mahanayaka
1:25 AM Wednesday 11 - December 2024

ಪೊಲೀಸರ ಲಾಠಿ ಚಾರ್ಜ್ ವಿರುದ್ಧ ಕತ್ತಿ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ ರೈತರು

26/01/2021

ದೆಹಲಿ: ಶಾಂತಿಯುತವಾಗಿ ದೆಹಲಿಗೆ ಪ್ರವೇಶಿಸುತ್ತಿದ್ದ ರೈತರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರಿಂದಾಗಿ ರೈತರ ಆಕ್ರೋಶ ಮುಗಿಲು ಮುಟ್ಟಿದ್ದು, ತಮ್ಮ ಕೃಷಿ ಬಳಕೆಯ ಕತ್ತಿಗಳನ್ನು ಪ್ರದರ್ಶಿಸುವ ಮೂಲಕ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೋಯ್ಡಾದ ಮೋಡನಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿ ರೈತರ ಮೇಲೆ ಅಶ್ರುವಾಯು  ಪ್ರಯೋಗಿಸಿದ್ದಾರೆ. ಇದಲ್ಲದೇ ರೈತರನ್ನು ದೆಹಲಿ ಪ್ರವೇಶಿಸಲು ಪೊಲೀಸರು ನಿರ್ಬಂಧಿಸಿದ್ದಾರೆ. ತಮ್ಮ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿದ್ದಂತೆಯೇ ರೈತರು ಆಕ್ರೋಶಿತರಾಗಿದ್ದಾರೆ.

ಪೊಲೀಸರು ರೈತರ ಮೇಲೆ ಲಾಠಿ ಚಾರ್ಜ್ ನ ನೆಪದಲ್ಲಿ ಹಲ್ಲೆ ನಡೆಸುತ್ತಿದ್ದಂತೆಯೇ ರೈತರು ತಮ್ಮ ಕೃಷಿ ಬಳಕೆಯ ಕತ್ತಿಗಳನ್ನು ಹೊರ ತೆಗೆದು ಪೊಲೀಸರು ಸಿಬ್ಬಂದಿಯ ಕಡೆಗೆ ಓಡಿದ್ದಾರೆ. ರೈತರ ಆಕ್ರೋಶ ಕಂಡು ಪೊಲೀಸ್ ಸಿಬ್ಬಂದಿ ಚೆಲ್ಲಾಪಿಲ್ಲಿಯಾಗಿದ್ದಾರೆ.

ಇತ್ತೀಚಿನ ಸುದ್ದಿ