ಪ್ರಸಿದ್ಧ ಸ್ಕೈ ರೆಸಾರ್ಟ್ ನಲ್ಲಿ ಅಶ್ಲೀಲ ಫ್ಯಾಶನ್ ಶೋ: ವಿವಾದ ಸೃಷ್ಟಿ - Mahanayaka

ಪ್ರಸಿದ್ಧ ಸ್ಕೈ ರೆಸಾರ್ಟ್ ನಲ್ಲಿ ಅಶ್ಲೀಲ ಫ್ಯಾಶನ್ ಶೋ: ವಿವಾದ ಸೃಷ್ಟಿ

10/03/2025

ಜಮ್ಮು ಕಾಶ್ಮೀರದ ಗುಲ್ಮಾರ್ಗ್ ನಲ್ಲಿರುವ ಪ್ರಸಿದ್ಧ ಸ್ಕೈ ರೆಸಾರ್ಟ್ ನಲ್ಲಿ ರಂಝಾನ್ ನಲ್ಲಿ ಅಶ್ಲೀಲ ಫ್ಯಾಶನ್ ಶೋ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದೀಗ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಈ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದು 24 ಗಂಟೆಯ ಒಳಗಡೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಾರ್ಯಕ್ರಮದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದರೊಂದಿಗೆ ಕಾಶ್ಮೀರಿಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹುರಿಯತ್ ಕಾನ್ಫರೆನ್ಸ್ ನ ಮೀರ್ ವೈ ಝ್ ಉಮರ್ ಫಾರೂಕ್ ಅವರು ಈ ಕಾರ್ಯಕ್ರಮದ ವಿರುದ್ಧ ಪ್ರಬಲ ಖಂಡನೆ ವ್ಯಕ್ತಪಡಿಸಿದ್ದಾರೆ.

ರಮಝಾನ್ ನ ಈ ಸಂದರ್ಭದಲ್ಲಿ ಮತ್ತು ಸೂಫಿ ಸಂತರ ಈ ನಾಡಲ್ಲಿ ಇಂತಹ ಫ್ಯಾಷನ್ ಶೋ ಮುಸ್ಲಿಮರ ಭಾವನೆಗಳನ್ನು ತೀವ್ರವಾಗಿ ಘಾಸಿಗೊಳಿಸುತ್ತದೆ ಎಂದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಮಝಾನ ಈ ಸಮಯದಲ್ಲಿ ಇಂತಹ ಕಾರ್ಯಕ್ರಮವನ್ನು ಏರ್ಪಡಿಸಿದವರು ಮತ್ತು ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಡಿಸೈನರ್ಗಳಾದ ಶಿವನ್ ಮತ್ತು ನರೇಶ್ ಎಂಬವರು ತಮ್ಮ ಉದ್ಯಮಕ್ಕೆ 15 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಮಾರ್ಚ್ ಏಳರಂದು ಈ ಫ್ಯಾಷನ್ ಶೋ ಕಾರ್ಯಕ್ರಮ ಏರ್ಪಡಿಸಿದ್ದರು. ಇದೀಗ ಅವರು ಇನ್ಷ್ಟಾ ಗ್ರಾಮ್ ನಿಂದ ಈ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ