ಟೋಲ್ ಸಂಗ್ರಹ: ಫಾಸ್ಟ್ ಟ್ಯಾಗ್ ವ್ಯವಸ್ಥೆ ಶೀಘ್ರವೇ ರದ್ದು! - Mahanayaka
10:03 PM Thursday 14 - November 2024

ಟೋಲ್ ಸಂಗ್ರಹ: ಫಾಸ್ಟ್ ಟ್ಯಾಗ್ ವ್ಯವಸ್ಥೆ ಶೀಘ್ರವೇ ರದ್ದು!

fastag system
03/05/2022

ನವದೆಹಲಿ: ಇದೀಗ ತೆರಿಗೆ ಸಂಗ್ರಹಿಸಲು ಹೊಸ ಹೈಟೆಕ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಅದರ ನಂತರ ಫಾಸ್ಟ್ಯಾಗ್  ವ್ಯವಸ್ಥೆಯನ್ನು ರದ್ದುಗೊಳಿಸಿ ಹೊಸ ವ್ಯವಸ್ಥೆಯು ಉಪಗ್ರಹ ನ್ಯಾವಿಗೇಷನ್ ಸಿಸ್ಟಮ್‌ಅನ್ನು ಆಧರಿಸಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಹೊಸ ವ್ಯವಸ್ಥೆಗೆ ಕೆಲಸ ಪ್ರಾರಂಭವಾಗಿದ್ದು ಮತ್ತು ಅದರ ಪ್ರಾಯೋಗಿಕ ಯೋಜನೆಗೆ ಸಹ ಚಾಲನೆ ನೀಡಲಾಗಿದೆ. ಗ್ರೀನ್ ಸಿಗ್ನಲ್ ದೊರೆತ ತಕ್ಷಣ ಫಾಸ್ಟ್ಯಾಗ್ ಬದಲಿಗೆ ನೇವಿಗೇಷನ್ ವ್ಯವಸ್ಥೆಯಿಂದ ಟೋಲ್ ಸಂಗ್ರಹ ಕಾರ್ಯ ಆರಂಭಿಸಲಾಗುವುದು. ವಿಶೇಷವೇನೆಂದ್ರೆ ಈ ವ್ಯವಸ್ಥೆಯಲ್ಲಿ ಎಷ್ಟು ಕಿಲೋಮೀಟರ್‌ ವಾಹನಗಳು ಓಡಿರುತ್ತವೆಯೋ ಅಷ್ಟೆಕ್ಕೆ ಮಾತ್ರ ಟೋಲ್ ಪಾವತಿಸಬೇಕಾಗುತ್ತಿದ್ದು, ಹೆದ್ದಾರಿಯಲ್ಲಿ ವಾಹನ ಹೆಚ್ಚು ಓಡಿದ್ದರೇ ಹೆಚ್ಚು ಟೋಲ್ ಕಟ್ಟಬೇಕಾಗುತ್ತದೆ.

ಯುರೋಪ್ ದೇಶಗಳಲ್ಲಿ ಕಿಲೋಮೀಟರ್ ಪ್ರಕಾರ ಟೋಲ್ ಸಂಗ್ರಹದ ವ್ಯವಸ್ಥೆ ಯಶಸ್ವಿಯಾಗಿದೆ. ಭಾರತದಲ್ಲೂ ಅದೇ ಮಾದರಿಯಲ್ಲಿ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ. ಪ್ರಸ್ತುತ, ಫಾಸ್ಟ್‌ಟ್ಯಾಗ್‌ಗೆ ಒಂದು ಟೋಲ್‌ನಿಂದ ಇನ್ನೊಂದಕ್ಕೆ ಪೂರ್ಣ ಶುಲ್ಕ ವಿಧಿಸಲಾಗುತ್ತದೆ. ನೀವು ಅರ್ಧದಷ್ಟು ದೂರವನ್ನು ಮಾತ್ರ ಕ್ರಮಿಸಿದರೂ ಸಹ, ಪೂರ್ಣ ದೂರದ ದರವನ್ನು ಪಾವತಿಸಬೇಕಾಗುತ್ತದೆ. ಇದರಿಂದ ಟೋಲ್ ದುಬಾರಿಯಾಗುತದೆ.

ಇದೇನೇ ಇರಲಿ, ನಮ್ಮ ದೇಶದ ರಸ್ತೆ ನಿರ್ಮಾಣ ಸರ್ಕಾರದ ಜವಾಬ್ದಾರಿ. ಆದರೆ ಸರ್ಕಾರ, ಖಾಸಗಿಯವರಿಗೆ ಕಾಂಟ್ರಾಕ್ಟ್ ನೀಡಿ ರಸ್ತೆ ನಿರ್ಮಿಸಿ, ಖಾಸಗಿಯವರಿಗೆ ಹಣ ಸುರಿಯುವಂತಾಗಿರುವುದು ಮಾತ್ರ ದುರಂತವೇ ಸರಿ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವಿವಾಹ ವಾರ್ಷಿಕೋತ್ಸವದಂದೇ ಅಪಘಾತದಲ್ಲಿ ಕಾನ್ ಸ್ಟೇಬಲ್ ಸಾವು

ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಪ್ರತಿಜ್ಞೆ ಸ್ವೀಕರಿಸಿದ ಬಿಜೆಪಿ ಶಾಸಕ

ಶಾವರ್ಮಾದಲ್ಲಿ ಬಳಸುವ ಮಯೋನೆಸ್ ಎಷ್ಟು ಅಪಾಯಕಾರಿ?

ಹೊಟೇಲ್ ನ ಮೆನು ನೋಡಿ ಬಿದ್ದು ಬಿದ್ದು ನಕ್ಕ ಜನ: ಅಷ್ಟಕ್ಕೂ ಅಲ್ಲಿ ನಡೆದದ್ದೇನು?

ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಅವಘಡ: ಸ್ವಲ್ಪ ತಡವಾಗಿದ್ದರೆ ನಡೆಯುತ್ತಿತ್ತು ಭಾರೀ ದುರಂತ!

ಇತ್ತೀಚಿನ ಸುದ್ದಿ