ಚಾರ್ಜಿಂಗ್ ವೇಳೆ ಎಲೆಕ್ಟ್ರಿಕ್ ಬೈಕ್ ಸ್ಫೋಟ: ತಂದೆ, ಮಗಳ ದುರಂತ ಸಾವು
ಚೆನ್ನೈ: ತಮಿಳುನಾಡಿನ ವೆಲ್ಲೂರಿ(Vellore )ನಲ್ಲಿ ಚಾರ್ಜ್ ಮಾಡುತ್ತಿದ್ದ ವೇಳೆ ಎಲೆಕ್ಟ್ರಿಕ್ ಬೈಕ್ ಸ್ಫೋಟಗೊಂಡು ತಂದೆ ಮಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ವೆಲ್ಲೂರು ಸಮೀಪದ ಅಲ್ಲಾಪುರದ ಶಿವಪುರಂ ನಿವಾಸಿ ದುರೈ ವರ್ಮಾ (49) ಮತ್ತು ಅವರ ಪುತ್ರಿ ಮೋಹನ ಪ್ರೀತಿ (13) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ವರ್ಮಾ ಇತ್ತೀಚೆಗೆ ಎಲೆಕ್ಟ್ರಿಕ್ ಬೈಕ್(Electric bike) ಖರೀದಿಸಿದರು . ಚಾರ್ಜ್ ಮಾಡಲು ಮನೆಯ ಹೊರಗಿನ ಹಳೆಯ ಸ್ವಿಚ್ ಬೋರ್ಡ್ ಗೆ ಕನೆಕ್ಟ್ ಮಾಡಿ ಮಲಗಿದರು ಆದರೆ ರಾತ್ರಿ ಬ್ಯಾಟರಿ ಸ್ಫೋಟಗೊಂಡು ಬೈಕಿಗೆ ಬೆಂಕಿ ತಗುಲಿದೆ ನಂತರ ಮನೆಗೂ ಬೆಂಕಿ ತಗುಲಿದೆ.
ಬೆಂಕಿಯಿಂದ ತಪ್ಪಿಸಿಕೊಳ್ಳಲು ವರ್ಮಾ ಮತ್ತು ಅವರ ಮಗಳು ಶೌಚಾಲಯದ ಒಳಗೆ ಹೋದರು ಆದರೆ, ಬೆಂಕಿಯ ಹೊಗೆ ಇಬ್ಬರನ್ನೂ ಉಸಿರುಗಟ್ಟಿಸಿತ್ತು. ಬೆಂಕಿ ವ್ಯಾಪಿಸುತ್ತಿರುವುದನ್ನು ಕಂಡ ನೆರೆಹೊರೆಯವರು ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಬೆಂಕಿಯನ್ನು ಹತೋಟಿಗೆ ತಂದ ರಕ್ಷಣಾ ಸಿಬ್ಬಂದಿಯವರು ಮನೆಗೆ ಪ್ರವೇಶಿಸಿದಾಗ ವರ್ಮಾ ಮತ್ತು ಅವರ ಮಗಳು ಅಷ್ಟೊತ್ತಿಗಾಗಲೇ ಸಾವನ್ನಪ್ಪಿದ್ದರು. ಪೊಲೀಸರು ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಎಷ್ಟು ವಯಸ್ಸಿನವರು ಎಷ್ಟು ಹೊತ್ತು ನಿದ್ರಿಸಬೇಕು? | ತಜ್ಞರು ಏನಂತಾರೆ ನೋಡಿ…
ಮನೆಗೆ ಬೆಂಕಿಯಿಟ್ಟು 8 ಮಂದಿಯ ಹತ್ಯೆ ಪ್ರಕರಣ: 21 ಆರೋಪಿಗಳ ಬಂಧನ | ತನಿಖೆ ಆರಂಭಿಸಿದ ಸಿಬಿಐ
ನವಜಾತ ಶಿಶುವಿನ ಮೃತದೇಹವನ್ನು ಹೊಲದಲ್ಲಿ ಎಸೆದು ಹೋದ ಪಾಪಿಗಳು!
ಸಂಚಾರಿ ವಿಜಯ್ ಅವರ ಮುಂದಿನ ಚಿತ್ರವನ್ನು ಎಲ್ಲರೂ ವೀಕ್ಷಿಸಿ: ಮಲಯಾಳಂ ಖ್ಯಾತ ನಟ ಮಮ್ಮುಟ್ಟಿ ಕರೆ