ಮಗುವಿಗೆ ಅರಿಶಿಣ ಕುಂಕುಮ ಬಲವಂತವಾಗಿ ತಿನ್ನಿಸಿದ ತಂದೆ: ಬಾಲಕಿಯ ಸ್ಥಿತಿ ಚಿಂತಾಜನಕ
ಅಮರಾವತಿ: ಕಂಪ್ಯೂಟರ್ ಯುಗದಲ್ಲೂ ಮಾನವಾತೀತ ಶಕ್ತಿಗಳ ಬಗ್ಗೆ ನಂಬುವ ಮತ್ತು ಮೌಢ್ಯಾಚರಣೆಯಲ್ಲಿ ತೊಡಗುವ ಅನಾಗರಿಕರಿಗೇನು ಬರವಿಲ್ಲ, ಇಲ್ಲೊಬ್ಬ ತಂದೆ ತನ್ನ ಮೌಢ್ಯಾಚರಣೆಯಿಂದ ತನ್ನ ಮಗುವಿನ ಪ್ರಾಣಕ್ಕೆ ಕುತ್ತು ತರುವಂತಹ ಕೆಲಸ ಮಾಡಿದ್ದಾನೆ.
ಹೌದು…! ಸದಾ ಒಂದಿಲ್ಲೊಂದು ಚಿತ್ರ ವಿಚಿತ್ರ ಮೌಢ್ಯಾಚರಣೆಗೆ ಸುದ್ದಿಯಾಗುವ ಆಂಧ್ರಪ್ರದೇಶದಲ್ಲಿ ಮತ್ತೊಂದು ಅನಾಗರಿಕ ಘಟನೆ ನಡೆದಿದೆ. ದೇವರನ್ನು ಮೆಚ್ಚಿಸಲು ತಂದೆಯೊಬ್ಬ ತನ್ನ ನಾಲ್ಕು ವರ್ಷದ ಮಗಳಿಗೆ ಕುಂಕುಮ ಹಾಗೂ ಅರಿಶಿಣವನ್ನು ತಿನ್ನಿಸಿದ್ದು, ಪರಿಣಾಮವಾಗಿ ಮಗು ಅಸ್ವಸ್ಥಗೊಂಡು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಆಂಧ್ರಪ್ರದೇಶದ ಆತ್ಮಕೂರು ಪುರಸಭಾ ವ್ಯಾಪ್ತಿಯ ಪೆರಾರೆಡ್ಡಿಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯ ತಂದೆ ವೇಣುಗೋಪಾಲ್ ಎಂಬಾತ ಮೌಢ್ಯಾಚರಣೆಯಲ್ಲಿ ತೊಡಗಿದ್ದು, ದೇವರನ್ನು ಮೆಚ್ಚಿಸಲು ಅರಿಶಿಣ ಕುಂಕುಮವನ್ನು ಮನೆ ತುಂಬಾ ಎರಚಿದ ಬಳಿಕ ತನ್ನ ನಾಲ್ಕು ವರ್ಷದ ಮಗಳಿಗೆ ಅರಶಿಣ, ಕುಂಕುಮ ತಿನ್ನುವಂತೆ ಹೇಳಿದ್ದಾನೆ. ಈ ವೇಳೆ ಬಾಲಕಿ ತಿನ್ನಲು ನಿರಾಕರಿಸಿದಾಗ, ಬಲವಂತವಾಗಿ ಆಕೆಯ ಬಾಯಿಗೆ ಅರಿಶಿಣ ಕುಂಕುಮ ತಿನ್ನಿಸಿದ್ದು, ಪರಿಣಾಮವಾಗಿ ಬಾಲಕಿ ಜೋರಾಗಿ ಕಿರುಚಿ, ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ.
ಬಾಲಕಿಯ ಕಿರುಚಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಬಂದಿದ್ದು, ಬಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಮೂರು ದಿನಗಳಿಂದ ಮಂತ್ರವಾದಿಗಳ ಮಾತು ಕೇಳಿ ವೇಣುಗೋಪಾಲ್ ಚಿತ್ರ ವಿಚಿತ್ರ ಆಚರಣೆಯಲ್ಲಿ ತೊಡಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೀಗ ಕೊನೆಗೆ ತನ್ನ ಮೌಢ್ಯತೆಗೆ ತನ್ನ ಮಗಳನ್ನೇ ಬಲಿಕೊಡಲು ತಂದೆ ಮುಂದಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮದುವೆಗೆ ತೆರಳುತ್ತಿದ್ದವರ ದುರಂತ ಸಾವು: ಭೀಕರ ಅಪಘಾತಕ್ಕೆ 7 ಬಲಿ
500 ರೂಪಾಯಿ ತೆಗೆದರೆ 2,500 ರೂ. ಕೊಡ್ತಿದ್ದ ಎಟಿಎಂ: ಎಟಿಎಂ ಕೇಂದ್ರದ ಮುಂದೆ ಜನವೋ ಜನ!
ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿಯ ಕಾಲರ್ ಹಿಡಿದ ಕಾಂಗ್ರೆಸ್ ನಾಯಕಿ
ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಗೂಡ್ಸ್ ವಾಹನ ಪಲ್ಟಿ!
ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದಿದ್ದ ಒಂಟಿ ಮಹಿಳೆಯನ್ನು ಇರಿದು ಬರ್ಬರ ಹತ್ಯೆ!