6 ವರ್ಷದ ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಂದ ತಂದೆ: ರಕ್ಷಿಸಲು ಬಂದ ತನ್ನ ತಾಯಿಗೂ ಕೊಡಲಿ ಬೀಸಿದ
6 ವರ್ಷ ವಯಸ್ಸಿನ ಬಾಲಕಿಯನ್ನು ತಂದೆಯೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಕೇರಳದ ಮಾವೇಲಿಕ್ಕರ ಪುನ್ನಮಡು ಆನೆಗೊಂದಿಯಲ್ಲಿ ನಡೆದಿದ್ದು, ಘಟನೆ ಇಡೀ ಕೇರಳವನ್ನು ಬೆಚ್ಚಿಬೀಳಿಸಿದೆ.
6 ವರ್ಷ ವಯಸ್ಸಿನ ನಕ್ಷತ್ರ ತಂದೆಯಿಂದಲೇ ಹತ್ಯೆಗೀಡಾದ ಬಾಲಕಿಯಾಗಿದ್ದಾಳೆ. 38 ವರ್ಷ ವಯಸ್ಸಿನ ಮಹೇಶ್ ತನ್ನ ಪುತ್ರಿಯನ್ನೇ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.
ಮೂರು ವರ್ಷಗಳ ಹಿಂದೆ ನಕ್ಷತ್ರಾಳ ತಾಯಿ ವಿದ್ಯಾ ಆತ್ಮಹತ್ಯೆಗೆ ಶರಣಾಗಿದ್ದಳು. ಆನಂತರ ತಂದೆ ಮಹೇಶ್ ಹಾಗೂ ನಕ್ಷತ್ರ ಮನೆಯಲ್ಲಿದ್ದರು. ತಾಯಿಯನ್ನು ಕಳೆದುಕೊಂಡಿದ್ದ ನಕ್ಷತ್ರಾ ತನ್ನ ಅಜ್ಜ ಅಜ್ಜಿ(ವಿದ್ಯಾಳ ತಂದೆ ತಾಯಿ)ಯ ಬಳಿಗೆ ತನ್ನನ್ನು ಕರೆದೊಯ್ಯುವಂತೆ ಮಹೇಶ್ ನನ್ನು ಒತ್ತಾಯಿಸುತ್ತಿದ್ದಳು. ಇದೇ ವಿಚಾರವಾಗಿ ಮಗಳ ಮೇಲೆ ಏಕಾಏಕಿ ರೊಚ್ಚಿಗೆದ್ದ ಮಹೇಶ್ ಬುಧವಾರ ಸಂಜೆ 7:30ರ ವೇಳೆಗೆ ನಕ್ಷತ್ರಳನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಮಹೇಶ್ ನ ತಾಯಿ ಸುನಂದಾ ಆತನ ಸಹೋದರಿಯ ಮನೆಯಲ್ಲಿ ವಾಸವಿದ್ದರು. ನಕ್ಷತ್ರಾಳ ಕಿರುಚಾಟ ಕೇಳಿ ಓಡಿ ಬಂದು ನೋಡಿದಾಗ ಮಂಚದ ಮೇಲೆ ಬಾಲಕಿ ನಿಶ್ಚಲವಾಗಿ ಬಿದ್ದಿದ್ದಳು. ತಾಯಿಯನ್ನು ನೋಡಿದ ತಕ್ಷಣವೇ ಮಹೇಶ್ ತಾಯಿಯನ್ನೂ ಅಟ್ಟಾಡಿಸಿದ್ದು, ಅವರ ಕೈಯನ್ನು ಕತ್ತರಿಸಿದ್ದಾನೆ. ಜೊತೆಗೆ ಸಮೀಪದ ನಿವಾಸಿಗಳನ್ನು ಬೆದರಿಸಿದ್ದಾನೆ.
ನಕ್ಷತ್ರಾಳ ತಾಯಿ ಆತ್ಮಹತ್ಯೆ ಮಾಡಿಕೊಂಡ ಬಳಿಕ, ಮಹೇಶ್ ನ ತಂದೆ ಮುಕುಂದನ್ ರೈಲಿಗೆ ಸಿಲುಕಿ ಮೃತಪಟ್ಟಿದ್ದರು. ನಂತರ ವಿದೇಶಕ್ಕೆ ಹೋಗಿದ್ದ ಮಹೇಶ್, ಊರಿಗೆ ಮರಳಿದ್ದ. ಬಳಿಕ ಮರು ಮದುವೆಯಾಗಲು ಪ್ರಯತ್ನ ನಡೆಸಿದ್ದ. ಮಹಿಳಾ ಕಾನ್ ಸ್ಟೇಬಲ್ ಜೊತೆಗೆ ಮದುವೆ ಕೂಡ ನಿಶ್ಚಯಿಸಿದ್ದ. ಆದ್ರೆ, ಮಹೇಶ್ ನ ವ್ಯಕ್ತಿ ಅಸ್ವಸ್ಥತೆ ವಿಚಾರ ತಿಳಿದ ನಂತರ ಹೆಣ್ಣಿನ ಕಡೆಯವರು ಮದುವೆಯಿಂದ ಹಿಂದಕ್ಕೆ ಸರಿದಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw