ಪತ್ನಿಯ ಮೇಲಿನ ಸೇಡಿಗೆ 6 ವರ್ಷದ ಮಗನನ್ನೇ ಬಲಿ ಪಡೆದ ಪಾಪಿ ತಂದೆ
ಮುಂಬೈ: ವ್ಯಕ್ತಿಯೋರ್ವ ಪತ್ನಿಯ ಮೇಲಿನ ಸಿಟ್ಟಿನಲ್ಲಿ 6 ವರ್ಷದ ಮಗನನ್ನು ಕೊಂದ ಆಘಾತಕಾರಿ ಘಟನೆ ಮುಂಬೈ ನಲ್ಲಿ ಶನಿವಾರ ನಡೆದಿದೆ.
6 ವರ್ಷ ವಯಸ್ಸಿನ ಲಕ್ಷ್ಯ ಎಂಬ ಬಾಲಕ ತನ್ನ ತಂದೆಯಿಂದಲೇ ಹತ್ಯೆಗೀಡಾಗಿದ್ದು, ಆರೋಪಿ ತಂದೆ ನಂದನ್ ತನ್ನ ಪತ್ನಿ ಸುನೀತಾಳೊಂದಿಗೆ ಜಗಳವಾಡಿದ್ದು, ಜಗಳದ ಬಳಿ ಸುನೀತಾ ತನ್ನ 13 ವರ್ಷದ ಮಗಳನ್ನು ಶಾಲೆಗೆ ಬಿಟ್ಟು ಬರಲು ತೆರಳಿದ್ದಾಳೆ. ಈ ವೇಳೆ ಮನೆಯಲ್ಲಿದ್ದ 6 ವರ್ಷದ ಲಕ್ಷ್ಯನನ್ನು ನಂದನ್ ಗಂಟಲು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಸುನೀತಾ ಶಾಲೆಯಿಂದ ಮನೆಗೆ ಬಂದಾಗ ಲಕ್ಷ್ಯನನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಯನ್ನು ಮಾಲ್ವಾನಿ ಪೊಲೀಸರು ಬಂಧಿಸಿದ್ದು, ಐಪಿಸಿಯ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದಂಪತಿಯ ನಡುವೆ ಒಂದಲ್ಲ ಒಂದು ವಿಷಯಕ್ಕೆ ಜಗಳವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ದಂಪತಿಯ ಜಗಳಕ್ಕೆ ಪ್ರಪಂಚ ಅರಿಯುವ ಮುನ್ನವೇ ಮುಗ್ದ ಜೀವವೊಂದು ಬಲಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka