ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ತಂದೆ, ಮಗ: ತಾಯಿ ಸಾವಿಗೆ ಶರಣು | ಪತ್ನಿಯ ಸಾವಿನ ಸುದ್ದಿ ತಿಳಿದು ಪತಿ ಹೃದಯಾಘಾತದಿಂದ ಸಾವು

mysore
23/08/2023

ಮೈಸೂರು: ಮಗ ಹಾಗೂ ಪತಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದರಿಂದ ನೊಂದ ಮಹಿಳೆಯೊಬ್ಬರು ಸಾವಿಗೆ ಶರಣಾದ ಘಟನೆ ನಗರದ  ವಿದ್ಯಾನಗರ ಬಡಾವಣೆಯಲ್ಲಿ ಸೋಮವಾರ ನಡೆದಿದ್ದು, ಅತ್ತ ಪತ್ನಿಯ ಸಾವಿನ ಸುದ್ದಿ ಕೇಳಿ ಪತಿ ಹೃದಯಾಘಾತದಿಂದ ಮಂಗಳವಾರ ಸಾವನ್ನಪ್ಪಿದ್ದಾನೆ.

ಮೈಸೂರು ನಗರದ ವಿದ್ಯಾನಗರದ 4ನೇ ಕ್ರಾಸ್ ನ ನಿವಾಸಿ ಬಾಲರಾಜ್ ಎಂಬಾತನನ್ನು ಚಾಕುವಿನಿಂದ ಇರಿದು ಬರ್ಬರ ಹತ್ಯೆ ಮಾಡಲಾಗಿತ್ತು. ಈ ಹತ್ಯೆ ಸಂಬಂಧ ತೇಜಸ್ ಹಾಗೂ ತೇಜಸ್ ನ ತಂದೆ ಸಾಮ್ರಾಟ್,  ಸಂಜಯ್, ಕಿರಣ್ ಎಂಬ ಆರೋಪಿಗಳನ್ನ ಬಂಧಿಸಲಾಗಿತ್ತು.

ಬಂಧಿತ ಆರೋಪಿಗಳ ಪೈಕಿ ತಂದೆ ಸಾಮ್ರಾಟ್ ಹಾಗೂ ಮಗ ತೇಜಸ್ ಜೈಲು ಪಾಲಾಗಿದ್ದು, ಇನ್ನೊಂದೆಡೆ ತಾಯಿ ಇಂದ್ರಾಣಿ(35) ಒಬ್ಬಂಟಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಕೊಲೆಯಾದ ಬಾಲರಾಜ್ ನ ತಾಯಿ ಇಂದ್ರಾಣಿ ಮನೆಗೆ ಬಂದು ಗಲಾಟೆ ಮಾಡಿದ್ದಳು.

ಮಗ ಹಾಗೂ ಪತಿಯನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದರಿಂದ ಒಬ್ಬಂಟಿಯಾಗಿ, ತೀವ್ರವಾಗಿ ನೊಂದ ತಾಯಿ ಇಂದ್ರಾಣಿ ಸೋಮವಾರ ಸಂಜೆ ತಮ್ಮ ಮನೆಯಲ್ಲೇ ಸಾವಿಗೆ ಶರಣಾಗಿದ್ದಾರೆ. ಈ ವಿಚಾರ ತಿಳಿದ ತೇಜಸ್ ತಂದೆ ಸಾಮ್ರಾಟ್ ಕಳೆದ ರಾತ್ರಿ ಜೈಲಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಇನ್ನೂ ಇಂದ್ರಾಣಿ ಪ್ರಕರಣದ ಕುರಿತು ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಮ್ರಾಟ್ ಹೃದಯಾಘಾತದಿಂದ ಸಾವನ್ನಪ್ಪಿರುವ ಬಗ್ಗೆ ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ಸುದ್ದಿ

Exit mobile version