ಜೈಲಿನಲ್ಲಿಯೇ ಫಾದರ್ ಸ್ಟ್ಯಾನ್ ಸ್ವಾಮಿ ಸಾವು ತೀವ್ರ ನೋವುಂಟು ಮಾಡಿದೆ: ವಿಶ್ವಸಂಸ್ಥೆ - Mahanayaka
6:55 AM Thursday 19 - September 2024

ಜೈಲಿನಲ್ಲಿಯೇ ಫಾದರ್ ಸ್ಟ್ಯಾನ್ ಸ್ವಾಮಿ ಸಾವು ತೀವ್ರ ನೋವುಂಟು ಮಾಡಿದೆ: ವಿಶ್ವಸಂಸ್ಥೆ

father stan swamy
06/07/2021

ಜಿನಿವಾ: ಜೈಲಿನಲ್ಲಿದ್ದ 84 ವರ್ಷದ ಮಾನವ ಹಕ್ಕುಗಳ ಹೋರಾಟಗಾರ ಮತ್ತು ಜೆಸ್ಯೂಟ್ ಪಾದ್ರಿ ಫಾದರ್ ಸ್ಟ್ಯಾನ್ ಸ್ವಾಮಿ ಅವರ ಸಾವು ತೀವ್ರ ನೋವುಂಟು ಮಾಡಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ.

84 ವರ್ಷದ ಫಾದರ್ ಸ್ಟ್ಯಾನ್ ಸ್ವಾಮಿ ನಿಧನದಿಂದ ತೀವ್ರ ದುಃಖ ಮತ್ತು ಆಘಾತವಾಗಿದೆ ಎಂದು ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಹೈ ಕಮೀಷನರ್ ಕಚೇರಿ ವಕ್ತಾರ ಲಿಜ್ ತ್ರೊಸ್ಸೆಲ್ ಹೇಳಿದ್ದಾರೆ. ಪಾರ್ಕಿನ್ ಸನ್ಸ್ ಸೇರಿದಂತೆ ಮತ್ತಿತರ ರೋಗಗಳಿಂದ ನರಳುತ್ತಿದ್ದರೂ ಸ್ವಾಮಿ ಅವರಿಗೆ ಜಾಮೀನು ನೀಡಿರಲಿಲ್ಲ. ಕೊರೋನಾವೈರಸ್ ಕಾರಣದಿಂದ ಮೇ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಕಳೆದೊಂದು ವಾರದಿಂದ ಎದೆನೋವಿನಿಂದ ಬಳಲುತ್ತಿದ್ದರು.

 ಸ್ಟ್ಯಾನ್ ಸ್ವಾಮಿ ಅಲ್ಪಸಂಖ್ಯಾತ ಬುಡಕಟ್ಟು ಸಮುದಾಯದವರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದರು. 2018ರಲ್ಲಿ ವಿವಿಧ ಜಾತಿಗಳ ನಡುವಣ ಹಿಂಸಾಚಾರ ಆರೋಪದ ಮೇರೆಗೆ ಕಳೆದ ವರ್ಷ ಅವರನ್ನು ಬಂಧಿಸಲಾಗಿತ್ತು.


Provided by

 ಹೋರಾಟಗಾರರು, ವಿದ್ಯಾರ್ಥಿಗಳು, ಪತ್ರಕರ್ತರು ಮತ್ತಿತರನ್ನು ಬಂಧಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕಾನೂನನ್ನು ಬಳಸುತ್ತಿದೆ. ಪಾಧರ್ ಸ್ಟಾನ್ ಸ್ವಾಮಿ ಸೇರಿದಂತೆ ಮತ್ತಿತರ ಬಂಧನದ ಬಗ್ಗೆ ಹೈಕಮೀಷನರ್ ಮಿಚೆಲ್ ಬಚೆಲೆಟ್ ಮತ್ತು ವಿಶ್ವಸಂಸ್ಥೆಯ ಸ್ವತ್ರಂತ್ರ ತಜ್ಞರು ಪದೇ ಪದೇ ಪ್ರಶ್ನಿಸುತ್ತಿದ್ದಲ್ಲದೇ, ಅವರನ್ನು ಬಿಡುಗಡೆ ಮಾಡುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾಗಿ ಅವರು ತ್ರೊಸ್ಸೆಲ್ ಹೇಳಿದ್ದಾರೆ ಎಂದು ವರದಿಯಾಗಿದೆ.

 ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತ ಸಭೆ ಮತ್ತು ಸಂಘದ ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಯಾರನ್ನೂ ಬಂಧನಕ್ಕೊಳಗಾಗದಂತೆ ನೋಡಿಕೊಳ್ಳಬೇಕೆಂದು ಭಾರತ ಸರ್ಕಾರಕ್ಕೆ ಒತ್ತಿ ಹೇಳಿರುವುದಾಗಿ ತ್ರೋಸ್ಸೆಲ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ