PUB-G ಹೋದರೇನು FAU-G ಬಂತು ನೋಡಿ | PUB-Gಯಂತೆ ಬರಲಿದೆ ಹೊಸ ಗೇಮಿಂಗ್ ಆ್ಯಪ್
26/10/2020
ಕೇಂದ್ರ ಸರ್ಕಾರವು PUB-Gಯನ್ನು ನಿಷೇಧಿಸಿದ ಬಳಿಕ ಇದೀಗ ಭಾರತದಲ್ಲಿಯೇ ಇಂತಹದ್ದೊಂದು ಮೊಬೈಲ್ ಗೇಮ್ ಆಪ್ ಬರಲು ಸಿದ್ಧವಾಗಿದೆ. ಈ ಗೇಮ್ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಭಾರತ್ ಅಭಿಯಾನವನ್ನು ಬೆಂಬಲಿಸಿ ನಟ ಅಕ್ಷಯ್ ಕುಮಾರ್ ಅವರು ಘೋಷಿಸಿದ ಯೋಜನೆಯಾಗಿದೆ.
ದಸರಾ ಸಂದರ್ಭದಲ್ಲಿ ನಟ ಅಕ್ಷಯ್ ಕುಮಾರ್ PUB-Gಗೆ ಪರ್ಯಾಯವಾಗಿ FAU-Gಯ ಟೀಸರ್ ಬಿಡುಗಡೆ ಮಾಡಿದ್ದಾರೆ. ದಸರ ವಿಶೇಷವಾಗಿ ಈ ಟೀಸರ್ ಪರಿಚಯಿಸಿದ್ದೇವೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
FAU-G ಮೂಲಕ ನಟ ಅಕ್ಷಯ್ ಕುಮಾರ್ ಮೊದಲ ಗೇಮಿಂಗ್ ಉದ್ಯಮ ಆರಂಭಿಸಿದ್ದಾರೆ. ದೇಶದ ಭದ್ರತಾ ಪಡೆಗಳು ಎದುರಿಸುವ ನೈಜ ಸನ್ನಿವೇಶಗಳನ್ನು ಆಧರಿಸಿ ಈ ಆಪ್ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ಆಪ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುತ್ತದೆ ಎಂದು ಹೇಳಿದ್ದಾರೆ.