ಧ್ವಂಸ ಭೀತಿ: ಪೈಜಾಬ್ ಮಸೀದಿ&ಮದರಸಕ್ಕೆ ಪರ್ಯಾಯ ಜಾಗ ಕೊಡಿ ಎಂದ ಕೋರ್ಟ್
ಧ್ವಂಸದ ಭೀತಿಯನ್ನು ಎದುರಿಸುತ್ತಿರುವ ದೆಹಲಿಯ ನಿಜಾಮುದ್ದೀನ್ ಬಳಿಯ ಪೈಜಾಬ್ ಮಸೀದಿ ಮತ್ತು ಮದರಸಕ್ಕೆ ಪರ್ಯಾಯ ಜಾಗವನ್ನು ಮಂಜೂರು ಮಾಡಿ ಎಂದು ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ. 40 ವರ್ಷಗಳ ಈ ಮಸೀದಿಗೆ ಪರ್ಯಾಯ ಜಾಗವನ್ನು ಮುಂದಿನ ನಾಲ್ಕು ವಾರಗಳ ಒಳಗೆ ಮಂಜೂರು ಮಾಡಬೇಕು ಎಂದು ಆದೇಶಿಸಿದೆ.
ಬಳಿಕ ನ್ಯಾಯಾಲಯ ತನ್ನ ವಿಚಾರಣೆಯನ್ನು ಸೆಪ್ಟಂಬರ್ ತಿಂಗಳಿಗೆ ಮುಂದೂಡಿದೆ. ಸಂಭಾವ್ಯ ದ್ವಂಸ ಭೀತಿಯನ್ನು ಎದುರಿಸುತ್ತಿರುವ ಮಸೀದಿಗೆ ಅಷ್ಟೇ ಜಾಗವನ್ನು ಬೇರೆಕಡೆ ಮಂಜೂರು ಮಾಡಬೇಕು ಎಂದು ಕೋರಿ ಶಮ್ ಶಾದ್ ಅಲಿ ಮತ್ತು ಇತರರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಶಂಷಾದ್ ಅಲಿ ಮತ್ತು ಇತರರಿಗೆ ನ್ಯಾಯಾಲಯಕ್ಕೆ ದೂರು ಸಲ್ಲಿಸುವುದಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ನ ಅಸಿಸ್ಟೆಂಟ್ ಸೆಕ್ರೆಟರಿ ಇನಾಮುರಹಮಾನ್ ಖಾನ್ ಅವರು ನೆರವಾಗಿದ್ದರು. ಇದೇ ವೇಳೆ ಮುಂದಿನ ಒಂದು ವಾರದೊಳಗೆ ಈ ಮಸೀದಿ ಮತ್ತು ಮದರಸವನ್ನು ತೆರವುಗೊಳಿಸಲು ಬೇಕಾದ ಏರ್ಪಾಟು ಮಾಡಬೇಕು ಎಂದು ನ್ಯಾಯಾಲಯ ಮಸೀದಿ ಆಡಳಿತ ಸಮಿತಿಗೆ ಶರತ್ತು ವಿಧಿಸಿದೆ. ಮಸೀದಿ ಆಡಳಿತ ಸಮಿತಿಯು ಈಗಾಗಲೇ ಮಸೀದಿಯಲ್ಲಿರುವ ಕುರ್ ಆನ್ ಅನ್ನು ತೆರೆವುಗೊಳಿಸುವುದಾಗಿ ನ್ಯಾಯಾಲಯಕ್ಕೆ ನೀಡಿರುವ ವಾಗ್ದಾನವನ್ನು ನ್ಯಾಯಾಲಯ ಮತ್ತೆ ನೆನಪಿಸಿದೆ.
ಈ ಮಸೀದಿಯನ್ನು 1972 ರಲ್ಲಿ ಕಟ್ಟಲಾಗಿದ್ದು 1989ರ ವಖ್ಫ್ ಆಸ್ತಿ ನಿಯಮದ ಪ್ರಕಾರ ದೆಹಲಿ ವಖ್ಫ್ ಇಲಾಖೆಯ ಅಧೀನದಲ್ಲಿ ರಿಜಿಸ್ಟ್ರೇಷನ್ ಮಾಡಲಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth