ಈರುಳ್ಳಿ ಬೆಲೆ ಏರಿಕೆ ಭೀತಿ: 100ರ ಗಡಿದಾಟಲು ಸಜ್ಜಾಗಿದೆ ಈರುಳ್ಳಿ ಬೆಲೆ!
ಬೆಂಗಳೂರು: ಇತ್ತೀಚೆಗಷ್ಟೇ ಟೊಮೆಟೋ ಬೆಲೆ ಗಗನಕ್ಕೇರಿ ಗ್ರಾಹಕನ ಗಂಟಲು ಹಿಸುಕಿತ್ತು. ಇದೀಗ ಈರುಳ್ಳಿ ಬೆಲೆ ಗಗನಕ್ಕೇರುವ ಸೂಚನೆ ದೊರೆತಿದ್ದು, ನೂರರ ಗಡಿದಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮಳೆ ಇಲ್ಲದ ಕಾರಣ ಈರುಳ್ಳಿ ಬೆಲೆ ಕಡಿಮೆಯಾಗಿದ್ದು, ಇದರ ಪರಿಣಾಮವಾಗಿ ಈರುಳ್ಳಿ ಬೆಲೆ ಗಗನಕ್ಕೇರುವ ಲಕ್ಷಣಗಳು ಕಂಡು ಬಂದಿವೆ. ಹಲವೆಡೆಗಳಲ್ಲಿ ಈಗಾಗಲೇ ಈರುಳ್ಳಿ ಬೆಲೆ 70ರಿಂದ 80 ರೂಪಾಯಿಗಳಾಗಿವೆ. ಕಳೆದ ವಾರ 35ರಿಂದ 40ರವರೆಗಿದ್ದ ಈರುಳ್ಳಿ ಬೆಲೆ, ಕೇವಲ ಒಂದು ವಾರಗಳ ವ್ಯತ್ಯಾಸದಲ್ಲಿ 70ರಿಂದ 80ಕ್ಕೆ ಏರಿಕೆಯಾಗಿದೆ.
ಇದು ಈರುಳ್ಳಿ ಸೀಸನ್ ಆಗಿದ್ದರೂ, ಮಾರುಕಟ್ಟೆಗೆ ಈ ಹಿಂದಿನಷ್ಟು ಈರುಳ್ಳಿಗಳು ಬರುತ್ತಿಲ್ಲ. ಈ ಹಿಂದೆ ಇದೇ ಸಮಯಕ್ಕೆ ಸುಮಾರು ಸಾವಿರದಷ್ಟು ಲಾರಿ ಲೋಡ್ ಈರುಳ್ಳಿ ಬರುತ್ತಿತ್ತು. ಆದ್ರೆ ಇದೀಗ ಕೇವಲ 250ರಿಂದ 300 ಲೋಡ್ ಗಳಷ್ಟೇ ಬರುತ್ತಿವೆಯಂತೆ!
ಡಿಸೆಂಬರ್ ಅಂತ್ಯದೊಳಗೆ ಈರುಳ್ಳಿ ಬೆಲೆ ಗಗನಕ್ಕೇರುವ ಸಾಧ್ಯತೆಗಳು ಕಂಡು ಬಂದಿವೆ. ಈಗಾಗಲೇ 70ರ ಗಡಿದಾಟಿರುವ ಈರುಳ್ಳಿಗೆ ಡಿಸೆಂಬರ್ ವೇಳೆಗೆ 100ರಿಂದಲೂ ಹೆಚ್ಚು ಬೆಲೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.