ಮಹಿಳಾ ಪಿಎಸ್ ಐ ಅನುಮಾನಾಸ್ಪದ ಸಾವು! - Mahanayaka
3:16 PM Thursday 12 - December 2024

ಮಹಿಳಾ ಪಿಎಸ್ ಐ ಅನುಮಾನಾಸ್ಪದ ಸಾವು!

03/01/2021

ಲಕ್ನೋ: ಮಹಿಳಾ ಪಿಎಸ್ ಐ ಒಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಲಂದರ್ ಶಹರ್ ಜಿಲ್ಲೆಯಲ್ಲಿ ನಡೆದಿದ್ದು, ಅನೂಪ್ ಶಹರ್ ಕೊಟ್ಟಾಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆರ್ಜೋ ಪವಾರ್(30) ಆತ್ಮಹತ್ಯೆ ಮಾಡಿಕೊಂಡ ಪಿಎಸ್ ಐ ಆಗಿದ್ದಾರೆ. ಇವರು ವಾಸವಿದ್ದ ಬಾಡಿಗೆ ಮನೆಯ ಮಾಲಕಿ ಆರ್ಜೋ ಅವರಿಗೆ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ,  ಕರೆ ಸ್ವೀಕರಿಸಿದ್ದ ವೇಳೆ ಅನುಮಾನಗೊಂಡು ಬಾಗಿಲು ಬಡಿದಿದ್ದು, ಈ ವೇಳೆ ಬಾಗಿಲು ತೆರೆದಿರಲಿಲ್ಲ.  ಮನೆಗೆ ಒಳಗಿನಿಂದ ಲಾಕ್ ಮಾಡಿರುವುದು ತಿಳಿಯುತ್ತಿದ್ದಂತೆಯೇ ಅವರು, ಗ್ಯಾಸ್ ವೆಂಟಿಲೇಟರ್ ಮೂಲಕ ಒಳಗೆ ಹೋಗಿ ನೋಡಿದಾಗ ಪಿಎಸ್ ಐ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರ್ಜೋ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.  ಇನ್ನೂ ಆರ್ಜೋ ಅವರು ಬರೆದಿರುವ ಡೆತ್ ನೋಟ್ ಪತ್ತೆಯಾಗಿದೆ. ಇದರಲ್ಲಿ ತನ್ನ ಸಾವಿಗೆ ತಾನೇ ಕಾರಣ ಎಂದು ಅವರು ಬರೆದಿದ್ದಾರೆ. ಆದರೆ, ಪೊಲೀಸರಿಗೆ ಇಲ್ಲಿನ ಕೆಲವು ವಿದ್ಯಮಾನಗಳು ಅನುಮಾನ ತರಿಸಿದ್ದು, ಇದರಿಂದಾಗಿ ಹಲವು ಕೋನಗಳಲ್ಲಿ ತನಿಖೆ ನಡೆಸಿದ್ದಾರೆ. ಅವರ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದು, ಅವರು ಕೊನೆಗೆ ಯಾರಿಗೆ ಕರೆ ಮಾಡಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚುತ್ತಿದ್ದಾರೆ.

ಇತ್ತೀಚಿನ ಸುದ್ದಿ